ಬಸ್‌ ನಿಲ್ದಾಣವನ್ನೇ ಅಡವಿಟ್ಟ BMTC | RTIನಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ!

Prasthutha|

ಬೆಂಗಳೂರು: BMTC ಬೆಂಗಳೂರಿನಲ್ಲಿರುವ ಶಾಂತಿನಗರ TTMCಯನ್ನು ಅಡವಿಟ್ಟಿರುವ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ. ಆನಂದ ಎಂಬವರು 2019 ಅಕ್ಟೋಬರ್‌ 10 ರಿಂದ 2021 ಜನವರಿ 12ರವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಇದಕ್ಕೆ ಎಷ್ಟು ಬಡ್ಡಿಯನ್ನು ಕಟ್ಟಲಾಗುತ್ತಿದೆ ಮತ್ತು ಈ ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿಯ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.

- Advertisement -

ಇದಕ್ಕೆ ಉತ್ತರ ನೀಡಿರುವ RTI ಒಟ್ಟು 160 ಕೋಟಿ ರೂ. ಸಾಲವನ್ನು ಕೆನರಾ ಬ್ಯಾಂಕಿನಿಂದ ಪಡೆಯಲಾಗಿದೆ. ಈ ಸಾಲಕ್ಕೆ ಪ್ರತಿ ತಿಂಗಳು 1.04 ಕೋಟಿ ರೂ. ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಈ ಸಾಲ ಪಡೆಯಲು ಶಾಂತಿನಗರ TTMCಯನ್ನು ಅಡಮಾನ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Join Whatsapp