1 ರೂಪಾಯಿಗೆ 1 ಕೆಜಿ ಟೊಮೆಟೊ: ರಸ್ತೆಯಲ್ಲಿ ಸುರಿದು ಆಕ್ರೋಶ

Prasthutha|

- Advertisement -

ನಂದ್ಯಾಲ: ಗ್ರಾಹಕರನ್ನು ಕಂಗಾಲಾಗಿಸಿದ್ದ ಟೊಮೆಟೊ ಬೆಲೆ ಪಾತಾಳ ತಲುಪಿದೆ.

ದೇಶಾದ್ಯಂತ ಟೊಮೆಟೊ ಬೆಲೆ ಕೆ.ಜಿಗೆ 200 ರಿಂದ 250 ರೂಪಾಯಿ ಇತ್ತು. ಆದರೆ ಈಗ ಪಾತಾಳ ತಲುಪಿದ್ದು, ಆಂಧ್ರಪ್ರದೇಶದ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಸ್ತೆಯಲ್ಲಿ ಸುರಿದು ಆಕ್ರೋಶ, ಹತಾಶೆ ತೋರಿಸುತ್ತಿದ್ದಾರೆ.

- Advertisement -

ಗುರುವಾರ ನಂದ್ಯಾಲ ಜಿಲ್ಲೆಯ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ 1 ರೂ. ಯಿಂದ 3 ರೂ.ಗೆ ಮಾರಾಟವಾಗುತ್ತಿತ್ತು. ವ್ಯಾಪಾರಸ್ಥರು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೂ ಇತರೆ ಪ್ರದೇಶಗಳಲ್ಲಿ ನ್ಯಾಯಯುತ ಬೆಲೆ ಇಲ್ಲದ ಕಾರಣ ಪೂರೈಕೆ ಸ್ಥಗಿತಗೊಂಡಿದೆ. ಕನಿಷ್ಠ ಸಾರಿಗೆ ಶುಲ್ಕವೂ ಸಿಗದ ಕಾರಣ ಇಲ್ಲಿನ ರೈತರು ತೀವ್ರ ಬೇಸರ ಹೊರಹಾಕುತ್ತಿದ್ದಾರೆ



Join Whatsapp