ಮುಂಬೈ: ನಟಿ ರಾಖಿ ಸಾವಂತ್ ಪವಿತ್ರ ಸ್ಥಳ ಮಕ್ಕಾಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಇಂದು (ಆಗಸ್ಟ್ 31) ಮಕ್ಕಾದಿಂದ ವಾಪಸ್ಸಾಗಿದ್ದಾರೆ. ಈ ವೇಳೆ ರಾಖಿ ಸಾವಂತ್ ಬಿಳಿ ಬಣ್ಣದ ಬುರ್ಕಾ ಧರಿಸಿದ್ದು, ಮುಂಬೈನಲ್ಲಿ ಅಭಿಮಾನಿಗಳು ಅವರನ್ನು ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ರಾಖಿ ಮಾತಾನಾಡಿದ್ದಾರೆ. ಮೆಕ್ಕಾದ ಉಮ್ರಾ ಯಾತ್ರೆಯ ಬಗ್ಗೆ ಅನುಭವವನ್ನು ತಿಳಿಸಿದ್ದಾರೆ. ಈ ವೇಳೆ ತಮ್ಮನ್ನು ರಾಖಿ ಎಂದು ಕರೆಯುವ ಬದಲು ಫಾತಿಮಾ ಅಂತ ಕರೆಯಬೇಕು ಅವರು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ರಾಖಿ ಸಾವಂತ್ ಅವರು ಅಧಿಕೃತ ದಾಖಲೆಗಳಲ್ಲೂ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರಾ? ಮಾಧ್ಯಮದವರಿಂದ ಈ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಾಖಿ, ‘ದೇವರಿಗೆ ನಾನು ಇರುವ ಹಾಗೆಯೇ ಇಷ್ಟ. ಅದಕ್ಕಾಗಿ ಯಾವುದೇ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ. ಆದರೆ ಇನ್ನು ಮುಂದೆ ಫಾತಿಮಾ ಎಂದು ಕರೆಯಿರಿ ಎಂದಿದ್ದಾರೆ. ದಿಢೀರನೇ ಅವರು ಹೆಸರು ಬದಲಿಸಿಕೊಂಡಿರುವುದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಹಾರ ಹಾಕಲು ಬಂದಾಗ ಆತನನ್ನು ತಡೆದಿದ್ದಾರೆ. ಹಾರವನ್ನು ತೆಗೆದುಕೊಂಡು, ನಂತರ ಅದೇ ಹಾರವನ್ನು ಮಹಿಳೆಯೊಬ್ಬರಿಂದ ಹಾಕಿಸಿಕೊಂಡಿದ್ದಾರೆ.