One Free Press Coalition : ದೌರ್ಜನ್ಯಕ್ಕೀಡಾದ ಟಾಪ್ 10 ಪತ್ರಕರ್ತರ ಪಟ್ಟಿಯಲ್ಲಿ ಭಾರತದ ಸಿದ್ದೀಕ್ ಕಪ್ಪನ್

Prasthutha|

ನವದೆಹಲಿ : ಜಗತ್ತಿನಾದ್ಯಂತದ ಪತ್ರಕರ್ತರ ಮೇಲಿನ ಅನ್ಯಾಯದ ವಿರುದ್ಧ ಹೋರಾಡುವ ‘ಒನ್ ಫ್ರೀ ಪ್ರೆಸ್ ಕೊಲಿಶನ್’ ನ ’10 ಮೋಸ್ಟ್ ಅರ್ಜೆಂಟ್’ ಪಟ್ಟಿಯಲ್ಲಿ ಭಾರತದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಗ್ಗೆ ಪ್ರಸ್ತಾಪಿಸಲಾಗಿದೆ.

- Advertisement -

ಜಗತ್ತಿನಾದ್ಯಂತದ ಮಾಧ್ಯಮ ಸ್ವಾತಂತ್ರ್ಯ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿ, ಸತ್ಯವನ್ನು ಹೇಳಿದುದಕ್ಕೆ ದೌರ್ಜನ್ಯಕ್ಕೊಳಗಾದವರ ಪರವಾಗಿ ತ್ವರಿತವಾಗಿ ನಿಲ್ಲಬೇಕಾದ ಅನಿವಾರ್ಯತೆಯಿರುವವರ 10 ಮಂದಿಯ ಪಟ್ಟಿಯಲ್ಲಿ ಸಿದ್ದೀಕ್ ಕಪ್ಪನ್ ಹೆಸರು ಕೂಡ ಇದೆ. ವಿವಿಧ ದೇಶಗಳ ದೌರ್ಜನ್ಯಕ್ಕೊಳಗಾದ ಪತ್ರಕರ್ತರ ಫೆಬ್ರವರಿ ತಿಂಗಳ ಈ ಪಟ್ಟಿಯಲ್ಲಿ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಕುರಿತು ಮಾಹಿತಿ ನೀಡಲಾಗಿದೆ.

ಯಾವುದೇ ಅಧಿಕೃತ ಆರೋಪಗಳಿಲ್ಲದೆ ಪತ್ರಕರ್ತ ಸಿದ್ದೀಕ್ ಕಪ್ಪನ್ ರನ್ನು ವಿಚಾರಣಾಪೂರ್ವ ಬಂಧನಕ್ಕೆ ಗುರಿಮಾಡಲಾಗಿದೆ. ಭಾರತೀಯ ಪತ್ರಕರ್ತರಾದ ಸಿದ್ದೀಕ್ ಕಪ್ಪನ್ ವಿರುದ್ಧ ಯಾವುದೇ ದೋಷಾರೋಪ ದಾಖಲಾಗದಿದ್ದರೂ, ಅ.5ರಿಂದ ಅವರನ್ನು ವಿಚಾರಣಾಪೂರ್ವ ಬಂಧನಕ್ಕೆ ಒಳಪಡಿಸಲಾಗಿದೆ. ಉತ್ತರ ಪ್ರದೇಶದ ಟೋಲ್ ಪ್ಲಾಝಾದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣ(ಹಥ್ರಾಸ್ ದಲಿತ ಯುವತಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ)ವೊಂದಕ್ಕೆ ಸಂಬಂಧಿಸಿ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದ್ದ ವೇಳೆ, ಈ ಬಗ್ಗೆ ವರದಿ ಮಾಡಲು ತೆರಳಿದ್ದ ವೇಳೆ ಸಿದ್ದೀಕ್ ಕಪ್ಪನ್ ರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

- Advertisement -

ರಾಜಕೀಯ, ಅಪರಾಧ ಮತ್ತು ಪ್ರಸ್ತುತ ವ್ಯವಹಾರಗಳ ಕುರಿತು ವರದಿ ಮಾಡುವ ವರದಿಗಾರ ಸಿದ್ದೀಕ್ ಕಪ್ಪನ್, ಮಲಯಾಳಂ ಭಾಷೆಯ ಸುದ್ದಿ ಸಂಸ್ಥೆಯೊಂದಕ್ಕೆ ಸೇವೆ ಸಲ್ಲಿಸುತ್ತಿದ್ದರು. ಪ್ರಚೋದನೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಕಪ್ಪನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೋವಿಡ್ 19 ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಕಪ್ಪನ್ ರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಜೈಲಿನಲ್ಲಿ ವೈರಸ್ ನ ಸೋಂಕು ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ವರದಿ ತಿಳಿಸಿದೆ.

Join Whatsapp