ಪಂಜಾಬ್ ನಲ್ಲಿ ಸಿಬಿಐ ಕಾರ್ಯಾಚರಣೆ | 40 ಗೋಡಾನ್ ಗಳಿಂದ ಅಕ್ಕಿ, ಗೋದಿ ಮಾದರಿ ಸಂಗ್ರಹ

Prasthutha|

ನವದೆಹಲಿ : ನೂತನ ಕೃಷಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳುಗಳಿಂದ ರೈತರು ದೆಹಲಿ ಗಡಿ ಭಾಗಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿರುವ ನಡುವೆ, ಕಳೆದ ರಾತ್ರಿ ಸಿಬಿಐ ಪಂಜಾಬ್ ನಲ್ಲಿ ಸುಮಾರು 40 ದಾಸ್ತಾನು ಕೇಂದ್ರ(ಗೋಡಾನ್)ಗಳಿಗೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

- Advertisement -

ದಾಸ್ತಾನು ಕೇಂದ್ರಗಳಲ್ಲಿ ದಾಸ್ತಾನಿರಿಸಲಾದ ಅಕ್ಕಿ ಮತ್ತು ಗೋದಿ ಮಾದರಿಗಳನ್ನು ಸಿಬಿಐ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ನಿನ್ನೆ ರಾತ್ರಿಯಿಂದ ಅರೆಸೇನಾ ಪಡೆಯ ಭದ್ರತೆಯಲ್ಲಿ ಸಿಬಿಐ ಕಾರ್ಯಾಚರಣೆ ಆರಂಭವಾಗಿದೆ. ಪಂಜಾಬ್ ಗ್ರೇನ್ಸ್ ಪ್ರೊಕ್ಯುರ್ ಮೆಂಟ್ ಕಾರ್ಪೊರೇಶನ್, ಪಂಜಾಬ್ ವೇರ್ ಹೌಸಿಂಗ್ ಮತ್ತು ಫುಡ್ ಕಾರ್ಪೊರೇಶನ್ ಇಂಡಿಯಾಕ್ಕೆ ಸೇರಿದ ದಾಸ್ತಾನು ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ.

- Advertisement -

ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಿರತರಾಗಿರುವವರಲ್ಲಿ ಬಹುತೇಕ ರೈತರು ಪಂಜಾಬ್ ಮೂಲದವರು. ಗಣರಾಜ್ಯೋತ್ಸವ ದಿನ ನಡೆದ ರೈತರ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರ ಕುಮ್ಮಕ್ಕಿನಿಂದ ಹಿಂಸಾಚಾರಗಳು ನಡೆದಿವೆ ಎಂದು ಪ್ರತಿಭಟನಕಾರರು ಆರೋಪಿಸುತ್ತಿದ್ದಾರೆ.  

Join Whatsapp