ಜಮೀನಿಗೆ ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿಗೆ ಆನೆ ಬಲಿ: ಪ್ರಕರಣ ದಾಖಲು

Prasthutha|

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಸಾವನ್ನಪ್ಪಿದ್ದು, ಹಳೇ ಮೈಸೂರು ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಈ ದುರಂತ ಸಂಭವಿಸಿದೆ.

- Advertisement -

30 ರಿಂದ 35 ವರ್ಷದ ಗಂಡಾನೆ ಇದಾಗಿದ್ದು, ಉದಯ ಎಂಬುವವರಿಗೆ ಸೇರಿದ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದೆ.

ಘಟನೆ ನಂತರ ಜಮೀನು ಮಾಲೀಕ ಉದಯ ಪರಾರಿಯಾಗಿದ್ದು, 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 9 ಮತ್ತು 22 ರ ಪ್ರಕಾರ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp