ಕುಖ್ಯಾತ ಗ್ಯಾಂಗ್‌ಸ್ಟರ್ ಜರ್ನೈಲ್ ಸಿಂಗ್ ಹತ್ಯೆ

Prasthutha|

ಅಮೃತಸರ : ಪಂಜಾಬ್‌ನ ಅಮೃತಸರದಲ್ಲಿ ಬುಧವಾರ ಬೆಳಗ್ಗೆ 11ಗಂಟೆಯ ವೇಳೆ ನಡೆದ ಗ್ಯಾಂಗ್ ವಾರ್‌ನಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಜರ್ನೈಲ್ ಸಿಂಗ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

- Advertisement -

ಸಾಥಿಯಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, ಜರ್ನೈಲ್ ಸಿಂಗ್ ಅವರ ಎದುರಾಳಿ ಗ್ಯಾಂಗ್‌ನ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡಿರುವ ಪೊಲೀಸರು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.

ದಾಳಿಕೋರರು ದರೋಡೆಕೋರ ಜರ್ನೈಲ್ ಸಿಂಗ್ ಮೇಲೆ ಸುಮಾರು 24 ಗುಂಡುಗಳನ್ನು ಹಾರಿಸಿದ್ದಾರೆ. ಜರ್ನೈಲ್ ಸಿಂಗ್ ಗೋಪಿ ಘನಶ್ಯಾಂಪುರಿಯಾ ಗ್ಯಾಂಗ್‌ನ ಸದಸ್ಯ ಎಂದು ಹೇಳಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ 4 ಮಂದಿ ದಾಳಿಕೋರರು ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 15 ನಿಮಿಷಗಳ ಕಾಲ ಗುಂಡು ಹಾರಿಸಿ ಜರ್ನೈಲ್ ಸಿಂಗ್ ನನ್ನು ಹತ್ಯೆಗೈಯ್ಯಲಾಗಿದೆ.



Join Whatsapp