ದುಬೈ: ಯುಎಇಗೆ ಬರುವ ಬಹುತೇಕ ಮಂದಿಯ ಮೊದಲ ಆಸೆ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಾಗಿದೆ.
ಮತ್ತೊಂದು ವಾಸ್ತವವೆಂದರೆ ಹೆಚ್ಚಿನ ಜನರು ಹಲವಾರು ಬಾರಿ ಪರೀಕ್ಷೆಗೆ ಹಾಜರಾಗಿ ನಂತರ ಲೈಸನ್ಸ್ ಪಡೆಯುತ್ತಾರೆ. ಆದರೆ ಕೆಲವು ಪ್ರಜೆಗಳಿಗೆ ಯುಎಇಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವುದೇ ಪರೀಕ್ಷೆಯ ಅಗತ್ಯವಿಲ್ಲ.
ಯುಎಇ ಸರ್ಕಾರ ಗುರುತಿಸಿದ 43 ದೇಶಗಳ ಪ್ರಜೆಗಳು ಯುಎಇ ಆಂತರಿಕ ಸಚಿವಾಲಯದ ಮಾರ್ಕೂಸ್ ಸೇವೆಯ ಸದುಪಯೋಗವನ್ನು ಪಡೆದು ಯಾವುದೇ ಪರೀಕ್ಷೆಗಳಿಗೆ ಹಾಜರಾಗದೆ ತಮ್ಮ ದೇಶದ ಡ್ರೈವಿಂಗ್ ಲೈಸೆನ್ಸ್ಗಳನ್ನು ಯುಎಇ ಚಾಲನಾ ಪರವಾನಗಿಗಳಾಗಿ ಪರಿವರ್ತಿಸಬಹುದಾಗಿದೆ.
ನಿವಾಸ ವೀಸಾ ಹೊಂದಿರುವ ಅನಿವಾಸಿಗಳಿಗೆ ಈ ಸೌಲಭ್ಯ ಲಭ್ಯವಿದೆ. ಪರೀಕ್ಷೆಗಳಿಲ್ಲದೆ ತಮ್ಮ ದೇಶದ ಚಾಲನಾ ಪರವಾನಗಿಯನ್ನು ಬಳಸಿಕೊಂಡು ಯುಎಇಯಲ್ಲಿ ಲೈಸನ್ಸ್ ಪಡೆಯಬಹುದಾದ ದೇಶಗಳ ಪಟ್ಟಿಯನ್ನು ಯುಎಇ ಆಂತರಿಕ ಸಚಿವಾಲಯ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಆ 43 ದೇಶಗಳ ಹೆಸರು ಇಲ್ಲಿದೆ…
- Estonia
- Albania
- Portugal
- China
- Hungary
- Greece
- Ukraine
- Bulgaria
- Slovak
- Slovenia
- Serbia
- Cyprus
- Latvia
- Luxembourg
- Lithuania
- Malta
- Iceland
- Montenegro
- United State of America
- France
- Japan
- Belgium
- Switzerland
- Germany
- Italy
- Sweden
- Ireland
- Spain
- Norway
- New Zealand
- Romania
- Singapore
- Hong Kong
- Netherlands
- Denmark
- Austria
- Finland
- United Kingdom
- Turkey
- Canada
- Poland
- South Africa
- Australia