ಬೇರ್ಪಟ್ಟ ರೈಲು ಬೋಗಿಗಳು: ಪ್ರಯಾಣಿಕರು ಪಾರು

Prasthutha|

ಬೆಂಗಳೂರು: ತಾಂತ್ರಿಕ ಕಾರಣದಿಂದ ರಾಮನಗರದ ಬಳಿ ರೈಲು ಬೋಗಿಗಳು ಬೇರ್ಪಟ್ಟು, ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

- Advertisement -


ಮೈಸೂರಿನಿಂದ ಬೆಂಗಳೂರು ಕಡೆಗೆ ನಿನ್ನೆ ರಾತ್ರಿ 8 ಗಂಟೆಗೆ ಹೊರಟಿದ್ದ ತೂತುಕುಡಿ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ರಾಮನಗರ ನಿಲ್ದಾಣದಲ್ಲಿ ಬೇರ್ಪಟ್ಟಿವೆ.
ತಾಂತ್ರಿಕ ಕಾರಣದಿಂದಾಗಿ ಬೋಗಿಗಳು ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮಾಡಲಾಗುವುದು. ತನಿಖೆ ವೇಳೆ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನೋಡುನೋಡುತ್ತಲೇ ರೈಲಿನ ಮಧ್ಯಭಾಗದ ಬೋಗಿಗಳು ಬೇರ್ಪಟ್ಟವು. ಇದರಿಂದ ರೈಲಿನಲ್ಲಿ ಇದ್ದ ಪ್ರಯಾಣಿಕರು ಬೆಚ್ಚಿಬಿದ್ದರು. ನಂತರದಲ್ಲಿ ರೈಲು ಅಲ್ಲಿಯೇ ನಿಂತಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.


ನೆಲಕ್ಕುರುಳಿದ ಬೋಗಿಗಳು:
ಬಾಂದ್ರಾದಿಂದ ಜೋಧ್ ಪುರಕ್ಕೆ ಬರುತ್ತಿದ್ದ ಸೂರ್ಯನಗರಿ ಎಕ್ಸ್ ಪ್ರೆಸ್ ರೈಲು ಇತ್ತೀಚೆಗೆ ಪಾಲಿ ನಿಲ್ದಾಣ ತಲುಪುವ ಮುನ್ನವೇ ಹಳಿ ತಪ್ಪಿತ್ತು. ರೈಲಿನ 8 ಸ್ಲೀಪರ್ ಕೋಚ್ ಗಳು ಸೇರಿದಂತೆ 9 ಬೋಗಿಗಳು ಪಲ್ಟಿಯಾಗಿದ್ದವು. 3 ಬೋಗಿಗಳು ಹಳಿ ತಪ್ಪಿದ್ದವು. ಅಪಘಾತದಲ್ಲಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು. ವಾಯವ್ಯ ರೈಲ್ವೆಯ ಸಿಪಿಆರ್’ಒ ಅಧಿಕಾರಿ ವಿಜಯ್ ಶರ್ಮಾ ಪ್ರತಿಕ್ರಿಯಿಸಿ, ‘ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಜೋಧ್ ಪುರದಿಂದ ಪರಿಹಾರ ರೈಲನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈಗಾಗಲೇ ಉನ್ನತ ಅಧಿಕಾರಿಗಳು ಸ್ಥಳ ತಲುಪಿದ್ದಾರೆ. ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 12480 ಬಾಂದ್ರಾ ಟರ್ಮಿನಸ್’ನಿಂದ ಹೊರಟಿದ್ದ ಜೋಧ್’ಪುರ ಸೂರ್ಯನಗರಿ ಎಕ್ಸ್’ಪ್ರೆಸ್’ನ 12 ಕೋಚ್’ಗಳು ಜನವರಿ 1ರ ಮುಂಜಾವು 03.27ಕ್ಕೆ ಜೋಧ್ಪುರ ವಿಭಾಗದ ರಾಜ್’ಕಿವಾಸ್-ಬೊಮದರಾ ಮಾರ್ಗಮಧ್ಯೆ ಹಳಿ ತಪ್ಪಿವೆ’ ಎಂದು ತಿಳಿಸಿದ್ದರು.

- Advertisement -


ಘಟನೆಯಲ್ಲಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ವಾಯುವ್ಯ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದರು.



Join Whatsapp