ಮಂಗಳೂರು: ಇಲ್ಲಿನ ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ 2023 ರ ಆಡಳಿತ ಸಮಿತಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ರಾಗಿ ಜೋಕಟ್ಟೆ ಮೂಲದ ಮುಝೈನ್ ಗ್ರೂಪ್ ಆಫ್ ಕಂಪನಿಯ ಮಾಲಕ ಹಾಜಿ ಬಿ ಎಮ್ ಶರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಾಜಿ ಬಿ ಎಸ್ ಶರೀಫ್, ಪ್ರಧಾನ ಕಾರ್ಯದರ್ಶಿ-ಎಚ್ ಎಮ್ ಬಾವ, ಜೊತೆ ಕಾರ್ಯದರ್ಶಿಯಾಗಿ ಹಾಜಿ ಟಿ ಅಬೂಬಕ್ಕರ್, ಖಜಾಂಚಿಯಾಗಿ ಸುಲೈಮಾನ್ ಬೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅದ್ದು ಮನೆಗಾರ, ಲೆಕ್ಕ ಪರಿಶೋಧಕರಾಗಿ ಟಿಪಿಎಚ್ ಕಾದರ್, ಮದರಸ ಕರೆಸ್ಪಾಂಡೆಂಟ್ ಆಗಿ ಹಾಜಿ ಜೆ ಅಬ್ದುಲ್ ಖಾದರ್, ಕಾದರ್ ಗೋವಾ, ಅಶ್ರಫ್ ಕರಾವಳಿ, ಸಿರಾಜ್ ಮನೆಗಾರ, ಹುಸೈನ್ ಮಾಸಿತ, ಮುಹಮ್ಮದ್ ಮಾಮುವಾಕ ಆಯ್ಕೆಯಾದರು.