ಪಂಜಾಬ್ ಪೊಲೀಸರಿಗೆ ಶರಣಾದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್

Prasthutha|

ಹೊಸದಿಲ್ಲಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪಂಜಾಬ್ ಪೊಲೀಸರಿಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.

- Advertisement -

ಖಲಿಸ್ತಾನ ಪ್ರತಿಪಾದಕ ಹಾಗೂ ವಿವಾದಾತ್ಮಕ ಪ್ರವಚನಕಾರ ಅಮೃತ್‌ಪಾಲ್ ಮೊಗಾದಲ್ಲಿ ಪಂಜಾಬ್ ಪೊಲೀಸರಿಗೆ ಶರಣಾಗಿದ್ದು, ಆತ ಈಗ ಪೊಲೀಸರ ವಶದಲ್ಲಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಆತ ಕಳೆದ ಮಾರ್ಚ್ 18ರಿಂದ ತಲೆ ಮರೆಸಿಕೊಂಡಿದ್ದನು.

- Advertisement -

‘ವಾರಿಸ್ ಪಂಜಾಬ್ ದೇ’ ಎಂಬ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತ್ ಪಾಲ್ ಸಿಂಗ್‌ನನ್ನು ಪಂಜಾಬಿನ ‘ಭಿಂದ್ರನ್‌ವಾಲೆ 2.0’ ಎಂದೂ ಕರೆಯಲಾಗುತ್ತಿದೆ.

ಪ್ರತ್ಯೇಕ ಖಲಿಸ್ತಾನದ ಸ್ಥಾಪನೆಗಾಗಿ ಹೋರಾಟ ನಡೆಸಿ, 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್‌ನಲ್ಲಿ ಹತ್ಯೆಗೀಡಾಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಕಟ್ಟಾ ಅನುಯಾಯಿಯಾಗಿರುವ ಅಮೃತ್ ಪಾಲ್ ಸಿಂಗ್, ಭಿಂದ್ರನ್‌ವಾಲೆಯ ಬೋಧನೆ ಮತ್ತು ವೇಷ ಭೂಷಣಗಳನ್ನೇ ಅನುಕರಿಸುತ್ತಾನೆ. ಇದರಿಂದಾಗಿ ಈತ ‘ಭಿಂದ್ರನ್‌ವಾಲೆ 2.0’ ಎಂದೇ ಬೆಂಬಲಿಗರಲ್ಲಿ ಜನಪ್ರಿಯನಾಗಿದ್ದ.



Join Whatsapp