ತಿರುವನಂತಪುರಂ: RSS ಮುಖಂಡನೊಬ್ಬ ತನ್ನ ಒಡಹುಟ್ಟಿದ ಸಹೋದರನನ್ನೇ ಹತ್ಯೆಗೈದ ಘಟನೆ ನೆರೆಯ ರಾಜ್ಯ ಕೇರಳದ ವಯನಾಡಿನಲ್ಲಿ ನಡೆದಿದೆ.
ವಾಳಾಡ್ ಎಡತ್ತನ ವೆಂಙನಮುಟ್ಟಂನ ಜಯಚಂದ್ರ (42) ಕೊಲೆಯಾದವರು.
ಹತ್ಯೆಗೆ ಸಂಬಂಧಿಸಿದಂತೆ ಜಯಚಂದ್ರ ಅವರ ಹಿರಿಯ ಸಹೋದರ ರಾಮಕೃಷ್ಣನ್ (44) ಎಂಬಾತನನ್ನು ತಲಪುಝ ಪೊಲೀಸರು ಬಂಧಿಸಿದ್ದಾರೆ. ಈತ ಆರೆಸ್ಸೆಸ್ಸಿನ ಮುಖ್ಯ ಶಿಕ್ಷಕ್ ಆಗಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಮಕೃಷ್ಣನ್ ತನ್ನ ಕಿರಿಯ ಸಹೋದರನನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಆರೋಪಿಯು ದೊಣ್ಣೆಯಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿಸಿದ್ದು, ಸಂತ್ರಸ್ತನನ್ನು ಮಾನಂದವಾಡಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದರು.
ತಡೆಯಲು ಬಂದ ಜಯಚಂದ್ರ ಅವರ ಸ್ನೇಹಿತ ರವಿ ಮೇಲೆಯೂ ರಾಮಕೃಷ್ಣನ್ ಹಲ್ಲೆ ನಡೆಸಿದ್ದು, ರವಿ ಅವರ ಕಾಲು, ಹೊಕ್ಕುಳ ಮತ್ತು ಕೈಗೆ ಗಾಯಗಳಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.