ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿಗೆ ಬೆದರಿಕೆ ಆರೋಪ| 16 ವರ್ಷದ ಬಾಲಕನ ಬಂಧನ!

Prasthutha|

ನೋಯ್ಡಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಲಕ್ನೋದ 16 ವರ್ಷದ ಬಾಲಕನನ್ನು ನೋಯ್ಡಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

- Advertisement -

ಮೋದಿ ಹಾಗೂ ಯೋಗಿಯನ್ನು ಮುಗಿಸುವುದಾಗಿ ಮಾಧ್ಯಮ ಸಂಸ್ಥೆಗೆ ಇಮೇಲ್ ಕಳುಹಿಸಿದ ಬಾಲಕನ ವಿರುದ್ಧ ಏಪ್ರಿಲ್ 5 ರಂದು ನೊಯ್ಡಾದ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಈ ವಿಷಯವನ್ನು ತನಿಖೆ ಮಾಡಲಾಯಿತು ಎಂದು ಸಹಾಯಕ ಪೊಲೀಸ್ ಆಯುಕ್ತ (ನೋಯ್ಡಾ) ರಜನೀಶ್ ವರ್ಮಾ ಹೇಳಿದರು.

ಬಾಲಕನನ್ನು ಇಲ್ಲಿನ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ವರ್ಮಾ ತಿಳಿಸಿದ್ದಾರೆ.



Join Whatsapp