ಹಾಸ್ಯ ಚಕ್ರವರ್ತಿ ನರಸಿಂಹರಾಜು ರಂಗಮಂದಿರ ಲೋಕಾರ್ಪಣೆ

Prasthutha|

ತುಮಕೂರು: ತಿಪಟೂರಿನ ಕೆ.ಆರ್. ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರುನಾಡಿನ ಹಾಸ್ಯ ಚಕ್ರವರ್ತಿ ಆರ್. ನರಸಿಂಹರಾಜು ರಂಗಮಂದಿರವನ್ನು ಉದ್ಘಾಟಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಿರ್ಮಾಣವಾಗಿರುವ ಈ ಸುಸಜ್ಜಿತ ರಂಗ ಮಂದಿರದಲ್ಲಿ ಏಕ ಕಾಲದಲ್ಲಿ 620 ಕಲಾಸಕ್ತರು ಕುಳಿತುಕೊಳ್ಳಬಹುದು.
ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿರುವ ಈ ರಂಗಮಂದಿರದಲ್ಲಿ ನಾಟಕ, ರಂಗಭೂಮಿ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಹಿರಿಯ ಚಿತ್ರ ಸಾಹಿತಿ, ಚಲನಚಿತ್ರ ನಟ ನಿರ್ಮಾಪಕ, ಗಂಡಸಿ ಸದಾನಂದ ಸ್ವಾಮಿ, ಗುಪ್ತ, ಸುಬ್ಬಣ್ಣ, ತಿಪಟೂರು ಕೃಷ್ಣ, ದಯಾನಂದ್, ರಾಜಶೇಖರ್, ಪ್ರಭು, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ
ಮೂಡಲಪಾಯ ಯಕ್ಷಗಾನ ಭಾಗವತರು, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕಲ್ಮನೆ ನಂಜಪ್ಪ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರಾದ ಶ್ರೀಮತಿ ಹೇಮಲತಾ ಸೇರಿದಂತೆ ಇನ್ನಿತರ ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.



Join Whatsapp