ಚಿಕ್ಕಮಗಳೂರು: ವಿ.ಆರ್.ಎಲ್. ಲಾಜಿಸ್ಟಿಕ್ಸ್ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಸಾವಿರಾರು ಸೀರೆಗಳು ವಶಪಡಿಸಿಕೊಂಡಿದ್ದಾರೆ.
ಈ ಸೀರೆಗಳನ್ನು ಮತದಾರರಿಗೆ ಹಂಚಲು ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಮೂಲಕ ತರಿಸಲಾಗಿತ್ತು ಎನ್ನಲಾಗಿದೆ.
ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದನ್ ಕುಮಾರ್ ಜೈನ್ ಎಂಬವರ ಹೆಸರಿನಲ್ಲಿ ಸೀರೆಗಳನ್ನು ಸೂರತ್ ನ ಸಾರಿ ಫ್ಯಾಕ್ಟರಿಯಿಂದ ತರಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸೂರತ್ ಸಾರಿ ಫ್ಯಾಕ್ಟರಿಗೆ ಫೋನ್ ಮಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಚಂದನ್ ಕುಮಾರ್ ಜೈನ್ ಎಂಬಾತ ಪೊಲೀಸರು, ಅಧಿಕಾರಿಗಳಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.