ಐಫೋನ್ ಬದಲು ಡಿಟರ್ಜೆಂಟ್ ಸೋಪ್| ಗ್ರಾಹಕನಿಗೆ 74,000 ರೂ. ನೀಡುವಂತೆ ಫ್ಲಿಪ್‌ಕಾರ್ಟ್​ಗೆ​ ನ್ಯಾಯಾಲಯ ಸೂಚನೆ

Prasthutha|

ಕೊಪ್ಪಳ: ಐಫೋನ್ 11 ಬದಲು ಡಿಟರ್ಜೆಂಟ್ ಸೋಪ್ ಕಳುಹಿಸಿ ವಂಚಿಸಿದ್ದ ಪ್ರಕರಣದಲ್ಲಿ ಗ್ರಾಹಕನಿಗೆ 74,000 ರೂ. ನೀಡುವಂತೆ ಕರ್ನಾಟಕ ಗ್ರಾಹಕರ ನ್ಯಾಯಾಲಯ ಫ್ಲಿಪ್‌ಕಾರ್ಟ್​ಗೆ ಸೂಚಿಸಿದೆ.

- Advertisement -

ಕೊಪ್ಪಳ ಜಿಲ್ಲೆಯ ಹರ್ಷ ಎಂಬ ವಿದ್ಯಾರ್ಥಿ 2021ರ ಜನವರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂಪಾಯಿ ಮೌಲ್ಯದ iPhone 11 ಆರ್ಡರ್ ಮಾಡಿದ್ದ. ಆದರೆ, ಬಾಕ್ಸ್​ನಲ್ಲಿ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಡಿಟರ್ಜೆಂಟ್ ಸೋಪ್ ಬಂದಿತ್ತು. ಬಳಿಕ ಹರ್ಷ ಸತತ ಕಾನೂನು ಹೋರಾಟ ನಡೆಸಿದ್ದ. ಅಂತಿಮವಾಗಿ ಇದೀಗ ಮೂರು ವರ್ಷಗಳ ಬಳಿಕ ಹರ್ಷನಿಗೆ 74,000 ರೂ. ನೀಡುವಂತೆ ಗ್ರಾಹಕರ ನ್ಯಾಯಾಲಯವು ಫ್ಲಿಪ್‌ಕಾರ್ಟ್​ಗೆ ಆದೇಶಿಸಿದೆ.

ನ್ಯಾಯಾಲಯವು 48,999 ರೂ (ಮೊಬೈಲ್ ಫೋನ್ ವೆಚ್ಚ) ಮರುಪಾವತಿಗೆ ಆದೇಶ ನೀಡಿದೆ. ಮತ್ತು ವಂಚನೆ ಮಾಡಿದ್ದಕ್ಕಾಗಿ 10,000 ರೂ. ಹಾಗೂ ದೂರು ದಾಖಲಿಸಲು ತಗುಲಿದ ವೆಚ್ಚಕ್ಕಾಗಿ 15,000 ರೂ. ಪರಿಹಾರ ನೀಡುವಂತೆ ಫ್ಲಿಪ್‌ಕಾರ್ಟ್​ಗೆ ಸೂಚಿಸಿದೆ.



Join Whatsapp