ಪ್ರತಿಭಟನೆಯ ವೇಳೆ ಮಡಿದವರಿಗಾಗಿ ಮೌನ ಪ್ರಾರ್ಥನೆಯೊಂದಿಗೆ ಕೇಂದ್ರ-ರೈತರ ಮಧ್ಯೆ ಏಳನೆ ಸುತ್ತಿನ ಮಾತುಕತೆಗೆ ಚಾಲನೆ

Prasthutha|

ಹೊಸದಿಲ್ಲಿ: ಕೇಂದ್ರ ಮತ್ತು ಪ್ರತಿಭಟನಾ ನಿರತ ರೈತರ ಮಧ್ಯೆ ಏಳನೆ ಸುತ್ತಿನ ಮಾತುಕತೆ ಇಂದು ಆರಂಭಗೊಂಡಿದೆ. ಕೃಷಿ ಕಾನೂನುಗಳನ್ನು ಹಿಂಪಡೆಯುವುದು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿ ಗೆ ಕಾನೂನು ಸ್ಥಾನಮಾನ ನೀಡುವುದು ಇಂದಿನ ಮಾತುಕತೆಯ ಪ್ರಮುಖ ವಿಷಯಗಳಾಗಿವೆ. ತಮ್ಮ ಬೇಡಿಕೆ ಪೂರೈಸದಿದ್ದರೆ ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ಕೈಗೊಳ್ಳುವುದಾಗಿ ಈಗಾಗಲೇ ಕೊರೆಯುವ ಚಳಿ ಮತ್ತು ಮಳೆಯ ಮಧ್ಯೆ ದಿಲ್ಲಿ ಗಡಿಗಳ ಹೊರಗೆ ಬೀಡುಬಿಟ್ಟಿರುವ ರೈತರು ಎಚ್ಚರಿಸಿದ್ದರು.

- Advertisement -

ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರಿಗಾಗಿ ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.

ಕಳೆದ ಸುತ್ತಿನ ಮಾತುಕತೆಯಲ್ಲಿ ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡರ ಕುರಿತು ಎರಡೂ ಪಕ್ಷಗಳು ಅಂತಿಮ ನಿರ್ಣಯಕ್ಕೆ ಬಂದಿವೆ. ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಮತ್ತು ಕಳೆ ಸುಡುವಿಕೆಗಾಗಿ ದಂಡ ವಿಧಿಸುವ ವಾಯು ಗುಣಮಟ್ಟ ಆಯೋಗ ಸುಗ್ರೀವಾಜ್ನೆ ಕುರಿತ ವಿವಾದ ಈಗಾಗಲೇ ಬಗೆಹರಿದಿವೆ ಎಂದು ಕೇಂದ್ರ ಹೇಳಿತ್ತು.

- Advertisement -

ಆದರೆ ಸೆಪ್ಟಂಬರ್ ನಲ್ಲಿ ಪಾಸು ಮಾಡಲಾದ ಮೂರು ಕೃಷಿ ಕಾನೂನುಗಳ ಹಿಂಪಡೆಯುವ ವಿಷಯದಲ್ಲಿ ಕಗ್ಗಂಟು ಮುಂದುವರಿದಿತ್ತು.



Join Whatsapp