ಲಕ್ನೋ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಅನಿಲ್ ರಾಮದಾಸ್ ದಂಪತಿಯನ್ನು ಬಂಧಿಸಿದ್ದಾರೆ.
ಅಯೋಧ್ಯೆ ಪೊಲೀಸರು, ಮಹಾರಾಷ್ಟ್ರ ಮೂಲದ ಈ ಪತಿ ಮತ್ತು ಪತ್ನಿಯನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅನಿಲ್ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ಗೆಳತಿಯ ಸಹೋದರ ಬಿಲಾಲ್ ಎಂಬಾತನನ್ನು ಸಿಲುಕಿಸಲು ಆತನ ಮೊಬೈಲ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ರಾಮಜನ್ಮಭೂಮಿ ಮಂದಿರ ಮತ್ತು ದೆಹಲಿ ಮೆಟ್ರೋವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಅಯೋಧ್ಯೆ ಸಿ ಒ ಶೈಲೇಂದ್ರ ಕುಮಾರ್ ಗೌತಮ್ ತಿಳಿಸಿದ್ದಾರೆ.
ಬಂಧಿತರಿಂದ 9 ಮೊಬೈಲ್ ಫೋನ್ ಗಳು, 2 ಚಾರ್ಜರ್ ಗಳು, 2 ಲ್ಯಾಪ್ ಟಾಪ್, 2 ಮುಸ್ಲಿಮರು ಧರಿಸುವ ಕ್ಯಾಪ್, ನಿಲುವಂಗಿ, 3 ಆಧಾರ್ ಕಾರ್ಡ್, 4 ಪ್ಯಾನ್ ಕಾರ್ಡ್, 6 ಎಟಿಎಂ ಕಾರ್ಡ್, 5 ಚೆಕ್ ಬುಕ್, 2 ಪಾಸ್ ಬುಕ್, 3 ಜನನ ಪ್ರಮಾಣ ಪತ್ರ, 2 ಚುನಾವಣಾ ಆಯೋಗದ ಚೀಟಿ, 9 ಆಧಾರ್ ಕಾರ್ಡ್ ತಿದ್ದುಪಡಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.