ಪ್ರಧಾನಿ ವಿರುದ್ಧ ಆರೋಪ ಮಾಡಿದ ರಾಹುಲ್ ಗಾಂಧಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಬಿಜೆಪಿ ಸಂಸದ

Prasthutha|

ನವದೆಹಲಿ: ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ ಬೆನ್ನಿಗೆ ಬುಧವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ರಾಹುಲ್ ಗಾಂಧಿಯವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಲೋಕ ಸಭಾ ಸ್ಪೀಕರ್ ರಿಗೆ ಒತ್ತಾಯ ಮಾಡಿದರು.

- Advertisement -


ಅಲ್ಲದೆ ಆ ಆರೋಪಗಳೆಲ್ಲ ಸಾಕ್ಷ್ಯಾಧಾರಗಳಿಲ್ಲದ ಮಾನಹಾನಿಕರ ತಳಬುಡವಿಲ್ಲದ ಆರೋಪಗಳು ಎಂದೂ ದುಬೆ ಹೇಳಿದರು.
“ಈ ಹೇಳಿಕೆಯು ತಪ್ಪು ದಾರಿಗೆಳೆಯುವ, ಮಾನಹಾನಿಕರ, ಸಂಸದೀಯವಲ್ಲದ, ಗಣ್ಯತೆಯಿಲ್ಲದ ಹೇಳಿಕೆಗಳಾಗಿದ್ದು, ಸಂಸತ್ತಿನ ಮತ್ತು ಪ್ರಧಾನಿಯವರ ಘನತೆಯನ್ನು ತಗ್ಗಿಸುವುದಾಗಿದೆ. ರಾಹುಲ್ ಗಾಂಧಿಯವರು ಮಾಡಿರುವ ಆರೋಪಕ್ಕೆ ಪೂರಕವಾಗಿ ಸೂಕ್ತ ಸಾಕ್ಯ್ಯಾಧಾರಗಳು ಯಾವುದನ್ನೂ ನೀಡಿಲ್ಲ ಎಂದು ದುಬೆ ಸ್ಪೀಕರ್ ರಿಗೆ ಪತ್ರವನ್ನೂ ಬರೆದಿದ್ದಾರೆ.


“ಇದು ಸಂಸತ್ತಿನ ನಿಯಮಾವಳಿಗೆ ವಿರೋಧವಾಗಿದೆ. ಸಂಸತ್ತಿನ ನೀತಿ ನಿಯಮಾವಳಿ ಮುರಿದ ಕಾರಣಕ್ಕೆ ಕೂಡಲೆ ರಾಹುಲ್ ಗಾಂಧಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಿ” ಎಂದು ದುಬೆ ಬರೆದಿದ್ದಾರೆ.
ಕಾನೂನು ಮಂತ್ರಿ ಕಿರಣ್ ರಿಜೆಜು ಅವರು ಸಹ ರಾಹುಲ್ ಗಾಂಧಿಯವರ ಆರೋಪದಿಂದ ಕೆರಳಿದ್ದು, ಪ್ರಧಾನಿ ವಿರುದ್ಧ ವನ್ಯವಾದ ಆರೋಪ ಮಾಡಬಾರದು ಎಂದು ಹೇಳಿದರು. “ನೀವು ಅದಾನಿ ಜೊತೆಗೆ ಪ್ರಧಾನಿ ಇರುವ ಪೋಸ್ಟರ್ ತೋರಿಸಿದರೆ, ಅವರು ಅದಾನಿ ಜೊತೆಗೆ ಗುಜರಾತ್ ಮುಖ್ಯಮಂತ್ರಿ ಇರುವ ಪೋಸ್ಟರ್ ತೋರಿಸುತ್ತೇವೆ. ಸಂಸತ್ತು ಇಂತಹದ್ದಕ್ಕೆಲ್ಲ ಇರುವುದಲ್ಲ” ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.



Join Whatsapp