ಉಕ್ರೇನ್’ನಲ್ಲಿ ಹೆಲಿಕಾಪ್ಟರ್ ಪತನ: ಆಂತರಿಕ ಸಚಿವ ಸೇರಿದಂತೆ 16 ಮಂದಿ ಸಾವು

Prasthutha|

ಕೀವ್: ಉಕ್ರೇನ್ ರಾಜಧಾನಿ ಕೀವ್ ಬಳಿ ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಉಕ್ರೇನ್ ಆಂತರಿಕ ಸಚಿವ ಮತ್ತು ಅವರ ಸಹಾಯಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

- Advertisement -


ಉಕ್ರೇನ್ ಆಂತರಿಕ ಸಚಿವರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 16 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಹೊರ್ ಕ್ಲೈಮೆಂಕೊ ಮಾಹಿತಿ ನೀಡಿದ್ದಾರೆ.


ಕೀವ್’ನ ಪೂರ್ವ ಉಪನಗರವಾದ ಬ್ರೋವರಿಯಲ್ಲಿ ಅಪಘಾತ ಸಂಭವಿಸಿದೆ. ಸಾವನ್ನಪ್ಪಿದವರಲ್ಲಿ 9 ಮಂದಿ ತುರ್ತು ಸೇವೆಗಳ ಸಿಬ್ಬಂದಿಯಾಗಿದ್ದಾರೆ. ಘಟನೆಯಲ್ಲಿ 10 ಮಕ್ಕಳು ಸೇರಿದಂತೆ ಒಟ್ಟು 22 ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.



Join Whatsapp