ಸಿಟಿ ಸಿವಿಲ್ ಕೋರ್ಟ್’ಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಸುನೀಲ್ ಬಂಧನ

Prasthutha|

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್’ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಕಿಡಿಗೇಡಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

- Advertisement -


ಕಾಡುಗೋಡಿಯ ನಿವಾಸಿ ಸುನೀಲ್ ಬಂಧಿತ ಆರೋಪಿಯಾಗಿದ್ದಾನೆ. ಕೆಲವು ತಿಂಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಈತ ವಿಚಾರಣೆಯ ಸಲುವಾಗಿ ಕೋರ್ಟ್ಗೆ ಹಾಜರಾಗಿ ಹಿಂದಿರುಗುತ್ತಿದ್ದ. ಈ ಸಂದರ್ಭದಲ್ಲಿ ಅಂದರೆ, ಜನವರಿ 3ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್ 112 ಸಂಖ್ಯೆಗೆ ಕರೆ ಮಾಡಿ, ಬೆದರಿಕೆ ಕರೆ ಮಾಡಿದ್ದಾನೆ.


ಪೊಲೀಸರು ಬಾಂಬ್ ಪತ್ತೆದಳವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಕೈಗೊಂಡಿದ್ದರು. ಎಲ್ಲೆಡೆ ಹುಡುಕಾಡಿದಾಗ ಬಾಂಬ್ ಪತ್ತೆಯಾಗಿರಲಿಲ್ಲ. ಕೊನೆಗೆ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತಪಡಿಸಿದ್ದರು.

- Advertisement -


ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ವಿಧಾನಸೌಧ ಪೊಲೀಸರು ಆರೋಪಿಯ ಮೊಬೈಲ್ ಸಂಖ್ಯೆ ಆಧರಿಸಿ ಬಂಧಿಸಿದ್ದಾರೆ. ಕಾಡುಗೋಡಿಯಲ್ಲಿ ಈ ಹಿಂದೆ ನಡೆದಿದ್ದ ಪ್ರಕರಣದಲ್ಲಿ ಸುನೀಲ್ ಆರೋಪಿಯಾಗಿದ್ದನು. ಕೋರ್ಟ್ಗೆ ಹಲವು ಬಾರಿ ಓಡಾಡಿ ಬೇಸತ್ತಿದ್ದನಂತೆ. ಹೀಗಾಗಿ ದುಷ್ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp