ಆರ್‌’ಸಿಬಿಗೆ ಶಾಕಿಂಗ್‌ ನ್ಯೂಸ್‌; ಮುಂದಿನ ಐಪಿಎಲ್‌’ನಲ್ಲಿ ಗ್ಲೆನ್‌ ಮ್ಯಾಕ್ಸ್‌’ವೆಲ್‌ ಪಾಲ್ಗೊಳ್ಳುವುದು ಅನುಮಾನ

Prasthutha|

ಕೊಚ್ಚಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌- ಐಪಿಎಲ್‌’ನ 16ನೇ ಆವೃತ್ತಿಯು 2023 ಎಪ್ರಿಲ್‌-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಕೊಚ್ಚಿಯಲ್ಲಿ ನಡೆದಿದ್ದು ಎಲ್ಲಾ 10 ಫ್ರಾಂಚೈಸಿಗಳು ಹಲವು ಹಿರಿಯ-ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.

- Advertisement -

ಐಪಿಎಲ್‌’ನಲ್ಲಿ ಇದುವರೆಗೂ ಒಮ್ಮೆಯೂ ಚಾಂಪಿಯನ್‌ ಪಟ್ಟಕ್ಕೇರದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂದಿನ ಆವೃತ್ತಿ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. 2021ರಲ್ಲಿ ಆರ್‌’ಸಿಬಿ ತಂಡವನ್ನು ಕೂಡಿಕೊಂಡಿದ್ದ ಆಸ್ಟ್ರೇಲಿಯಾದ ಪ್ರಮುಖ ಆಲ್‌’ರೌಂಡರ್‌ ಗ್ಲೆನ್‌ ಮ್ಯಾಕ್ಸ್‌’ವೆಲ್‌, 16ನೇ ಆವೃತ್ತಿಯ ಐಪಿಎಲ್‌’ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ವೇಳೆ, ಕಳೆದ ತಿಂಗಳು ಮ್ಯಾಕ್ಸ್‌’ವೆಲ್‌ ಕಾಲಿಗೆ ಗಂಭೀರ ಪೆಟ್ಟುಮಾಡಿಕೊಂಡಿದ್ದಾರೆ. ಹೀಗಾಗಿ 34 ವರ್ಷದ ಮ್ಯಾಕ್ಸ್‌’ವೆಲ್‌, ಪ್ರಸಕ್ತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಪಾದದ ಗಾಯವು ತೀವ್ರ ತರದ್ದಾಗಿರುವುದರಿಂದ , ಮುಂದಿನ ಐಪಿಎಲ್‌’ನಲ್ಲಿ ಸ್ಟಾರ್‌ ಆಲ್‌’ರೌಂಡರ್‌’ಭಾಗವಹಿಸುವುದು ಅನುಮಾನವಾಗಿದೆ. ಮ್ಯಾಕ್ಸ್‌’ವೆಲ್‌’ಗೆ ಸೂಕ್ತ ಬದಲಿ ಆಟಗಾರನನ್ನು ಹುಡುಕುವುದು ಆರ್‌’ಸಿಬಿ ಪಾಲಿಗೆ ಕಷ್ಟಕರವಾಗಲಿದೆ.

- Advertisement -

ʻಬಹುಶಃ ನನ್ನ ಪಾದವನ್ನು ಕಳೆದುಕೊಳ್ಳುವ ಅವಕಾಶ ಇತ್ತು. ಆ ಘಟನೆ ತುಂಬಾ ಭಯಾನಕವಾಗಿತ್ತು. ಈಗ ನನಗೆ ನಡೆದಾಡಲು ಕೂಡ ಕಷ್ಟವಾಗುತ್ತಿದೆ. ನಡೆಯುವುದನ್ನು ಪ್ರಾರಂಭಿಸಬೇಕಿದೆ. ನನ್ನ ಪತ್ನಿಯ ಬೆಂಬಲವೇ ನನಗೀಗ ಆಶ್ರಯವಾಗಿದೆ. ಒಂದೂವರೆ ತಿಂಗಳಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಈ ನೋವಿನಿಂದ ಬೇಗ ಹೊರಬರಲು ಅವರು ಸಹಾಯ ಮಾಡಿದ್ದಾರೆ. ಈಗ ಸ್ವಲ್ಪ ಆರಾಮದಾಯಕವಾಗಿ ನಡೆಯಲು ಆರಂಭಿಸುತ್ತಿದ್ದೇನೆ. ಇನ್ನೂ ಕೆಲವು ದಿನಗಳಲ್ಲಿ ಊರುಗೋಲಿನ ಅವಶ್ಯಕತೆ ಇಲ್ಲದೆ ಓಡಾಡುತ್ತೇನೆ. ಆದಷ್ಟು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಗ್ಲೆನ್ ಮ್ಯಾಕ್ಸ್‌’ವೆಲ್ ಹೇಳಿದ್ದಾರೆ

ಕಳಪೆ ಫಾರ್ಮ್‌ ಕಾರಣದಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡದಿಂದ ಬಿಡುಗಡೆಯಾಗಿದ್ದ ಮ್ಯಾಕ್ಸ್‌’ವೆಲ್‌’ರನ್ನು 2021ರಲ್ಲಿ ಆರ್‌’ಸಿಬಿ ಖರೀದಿಸಿತ್ತು. 14ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ 14 ಪಂದ್ಯಗಳನ್ನಾಡಿದ್ದ ಮ್ಯಾಕ್ಸಿ, 45ರ ಸರಾಸರಿಯಲ್ಲಿ 6 ಅರ್ಧಶತಕಗಳನ್ನು ಒಳಗೊಂಡ 498 ರನ್‌’ಗಳಿಸಿದ್ದರು. ಆ ಮೂಲಕ ಆ ವರ್ಷದ ಆರ್‌ಸಿಬಿಯ ಟಾಪ್‌ ಸ್ಕೋರರ್‌ ಎನಿಸಿಕೊಂಡಿದ್ದರು.



Join Whatsapp