ನವದೆಹಲಿ: ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ಹಿರಿಯ ರೈಲ್ವೆ ಅಧಿಕಾರಿ ಅನಿಲ್ ಕುಮಾರ್ ಲಹೋಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೇಂದ್ರದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಲಹೋಟಿ ಅವರ ನೇಮಕಕ್ಕೆ ಅನುಮೋದನೆ ನೀಡಿದೆ.
ರೈಲ್ವೆ ಮಂಡಳಿಯ ಹಾಲಿ ಅಧ್ಯಕ್ಷ ಮತ್ತು ಸಿಇಒ ವಿ.ಕೆ.ತ್ರಿಪಾಠಿ ಡಿ.31ರಂದು ನಿವೃತ್ತರಾಗಲಿದ್ದು, ಪ್ರಸ್ತುತ ರೈಲ್ವೆ ಮಂಡಳಿ ಸದಸ್ಯರಾಗಿರುವ (ಮೂಲಸೌಕರ್ಯ) ಲಹೋಟಿ ಜ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅನಿಲ್ ಕುಮಾರ್ ಲಹೋಟಿ ಅವರು ಈ ಮೊದಲು ಭಾರತೀಯ ರೈಲ್ವೆಯ ನಾಗ್ಪುರ, ಜಬಲ್ಪುರ ಮತ್ತು ಭುಸಾವಲ್ ವಿಭಾಗದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.