ಕುವೈಟ್’ನಿಂದ ಮಂಗಳೂರಿಗೆ ತೆರಳುವ ಏರ್ ಇಂಡಿಯಾ ವಿಮಾನ ವಿಳಂಬ: ಪ್ರಯಾಣಿಕರ ಪರದಾಟ

Prasthutha|

ಮಂಗಳೂರು: ಆದಿತ್ಯವಾರ ಬೆಳಿಗ್ಗೆ 9:10ಕ್ಕೆ  ಕುವೈಟ್’ನಿಂದ ಮಂಗಳೂರಿಗೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿದ್ದು, ಇದರಿಂದ 150 ಪ್ರಯಾಣಿಕರು ವಿಮಾನಕ್ಕಾಗಿ ಕಾದು-ಕಾದು ಹೈರಾಣಾಗಿರುವ ಘಟನೆ ನಡೆದಿದೆ.

- Advertisement -

ಏರ್ ಇಂಡಿಯಾ ವಿಮಾನ ಆದಿತ್ಯವಾರ ಬೆಳಿಗ್ಗೆ 9:10ಕ್ಕೆ  ಕುವೈಟ್’ನಿಂದ ಕಣ್ಣೂರು ಮೂಲಕ ಮಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಮಾನ ತಡವಾಗಿದೆ. ಈ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕರು ಏರ್ ಇಂಡಿಯಾವನ್ನು ಟೀಕಿಸಿದರು.

“ಭಾನುವಾರ ಬೆಳಗ್ಗೆ 9.10ರ ವಿಮಾನ ವಿಳಂಬವಾಗಲಿದೆ, ಎಲ್ಲಾ ಪ್ರಯಾಣಿಕರನ್ನು ಸಂಜೆ 6.10ಕ್ಕೆ ಮತ್ತೊಂದು ವಿಮಾನದಲ್ಲಿ ಕಳುಹಿಸಲಾಗುವುದು. ಅಲ್ಲಿಯವರೆಗೆ ಹೋಟೆಲ್’ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು. ಸಂಜೆ 6.10ರ ವೇಳೆಗೆ ಯಾವುದೇ ವಿಮಾನ ಹೊರಡಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ರಾತ್ರಿ 10.30ಕ್ಕೆ ಮತ್ತೊಂದು ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಆದರೆ ರಾತ್ರಿ 10.30 ಆದಾಗ ವಿಮಾನ 12.30ಕ್ಕೆ ಹೊರಡಲಿದೆ ಎಂದು ತಿಳಿಸಲಾಯಿತು. ಇದರಿಂದ ಮಂಗಳೂರಿಗೆ ಹೊರಟಿದ್ದ ಸುಮಾರು 150 ಪ್ರಯಾಣಿಕರು ಸಂಕಷ್ಟಕ್ಕೀಡಾದರು ಎಂದು ಪ್ರಯಾಣಿಕರೊಬ್ಬರು ‘ಪ್ರಸ್ತುತ’ ನ್ಯೂಸ್’ಗೆ ತಿಳಿಸಿದ್ದಾರೆ.



Join Whatsapp