ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಏರಿಕೆಗೆ ಕೇಂದ್ರ ನ್ಯಾಯ ಇಲಾಖೆ ನಕಾರ

Prasthutha|

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದರಿಂದ ಉತ್ತಮ ಕಾರ್ಯಕ್ಷಮತೆ ಹೊಂದಿರದಂಥ ಕೆಲವು ನ್ಯಾಯಮೂರ್ತಿಗಳ ಸೇವಾವಧಿಯನ್ನು ವಿಸ್ತರಣೆ ಮಾಡಿದಂತಾಗುತ್ತದೆ. ಅಲ್ಲದೇ, ಸರ್ಕಾರಿ ಉದ್ಯೋಗಿಗಳು ಕೂಡ ಇದೇ ಬೇಡಿಕೆಯನ್ನು ಮುಂದಿಡುವ ಸಾಧ್ಯತೆಗಳಿರುತ್ತದೆ ಎಂದು ಕೇಂದ್ರ ನ್ಯಾಯ ಇಲಾಖೆ ಸಂಸದೀಯ ಸಮಿತಿಗೆ ತಿಳಿಸಿದೆ.

- Advertisement -

ಜೊತೆಗೆ, ಉನ್ನತ ನ್ಯಾಯಾಂಗಕ್ಕೆ ನೇಮಕ ಮಾಡುವ ವೇಳೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಕ್ರಮಗಳೊಂದಿಗೇ ನಿವೃತ್ತಿ ವಯಸ್ಸು ಏರಿಕೆಯನ್ನೂ ಪರಿಗಣಿಸಬಹುದು ಎಂದೂ ಹೇಳಿದೆ.

ದೇಶದಲ್ಲಿ ಪ್ರಸ್ತುತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಆಗಿದ್ದರೆ, ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 62 ಆಗಿದೆ.



Join Whatsapp