ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ನಲ್ಲಿ ಪಕ್ಷದ ಆಂತರಿಕ ಜಗಳ ತೀವ್ರಗೊಂಡಿದ್ದು, 13 ಮಂದಿ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಇತರ ಪಕ್ಷಗಳಿಂದ ಕಾಂಗ್ರೆಸ್’ಗೆ ವಲಸೆ ಬಂದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಲಿ ಕಾಂಗ್ರೆಸ್ ಶಾಸಕ ದಾನಸಾರಿ ಅನಸೂಯ (ಸೀತಕ್ಕ) ಮತ್ತು ಮಾಜಿ ಶಾಸಕ ವೇಮ್ ನರೇಂದರ್ ರೆಡ್ಡಿ ಸೇರಿದಂತೆ 13 ಸದಸ್ಯರು ರಾಜೀನಾಮೆ ನೀಡಿದ್ದಾರೆ.