ಮಂಗಳೂರು: ನಗರದ ರಥಬೀದಿಯ ಕೆಎಂಎಫ್’ನ ಮಳಿಗೆಯಲ್ಲಿ ಸಿಹಿ ಉತ್ಸವಕ್ಕೆ ಕೆಎಂಎಫ್ ಅಧ್ಯಕ್ಷ, ಎಂ.ಡಿ ಹಾಗೂ ಇತರೆ ಅಧಿಕಾರಿಗಳು ಚಾಲನೆ ನೀಡಿದರು.
ಒಂದು ತಿಂಗಳ ಕಾಲ ನಡೆಯುವ ಸಿಹಿ ಉತ್ಸವವನ್ನು ಪ್ರೋತ್ಸಾಹಿಸಿ ಕರ್ನಾಟಕದ ರೈತರ ಬದುಕಿಗೆ ಬದುಕು ನೀಡುವಂತೆ ಕೆಎಂಎಫ್ ದ.ಕ. ಅಧ್ಯಕ್ಷರಾದ ಸುಚರಿತ ಶೆಟ್ಟಿ ಹೇಳಿದರು.
ನಂದಿನಿಯ 300ರಷ್ಟು ಉತ್ಪನ್ನಗಳು ಇವೆ. ಅವೆಲ್ಲ ಶುದ್ಧ ಮತ್ತು ರೈತರ ಪರ. ಹೊಸ ವರ್ಷ ಮತ್ತು ಕ್ರಿಸ್ಮಸ್ ಸಿಹಿಯುಂಟು ಮಾಡಲಿ. ಎಲ್ಲಾ ಸಿಹಿಗಳಿಗೆ 20% ರಿಯಾಯಿತಿ ಇರುವುದಾಗಿಯೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ಡಿ,ನಿರ್ದೇಶಕಿ ಸುಭದ್ರಾ ರಾವ್, ಡಾ. ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.