ಬೆಂಗಳೂರು: ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಕನ್ನಡದ ಹಿರಿಯ ನಟಿ ಅಭಿನಯಾ ಅವರಿಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಲ್ಲದೆ, ಅಭಿನಯಾ ಅವರ ತಾಯಿ ಜಯಮ್ಮಗೆ 5 ವರ್ಷ ಜೈಲು ಶಿಕ್ಷೆ ನೀಡಿ, ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ಈ ಹಿಂದೆ ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು. ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ಜಯಮ್ಮಗೆ 5 ವರ್ಷ ಶಿಕ್ಷೆ ಹಾಗೂ ಅಭಿನಯಾಗೆ 2 ವರ್ಷ ಶಿಕ್ಷೆ ನೀಡಲಾಗಿದೆ.