ಪ್ರೇಯಸಿಯ‌ನ್ನು ಭೇಟಿ ಮಾಡಲು ಹೋಗಿ ಬಾವಿಗೆ ಬಿದ್ದ ಯುವಕ

Prasthutha|

ಪಾಟ್ನಾ: ಯುವಕನೋರ್ವ ಮಧ್ಯರಾತ್ರಿ ಪ್ರೇಯಸಿಯ‌ ಮನೆಗೆ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿರುವ ವಿಚಿತ್ರ ಘಟನೆಯೊಂದು ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಯುವಕ ಮಧ್ಯರಾತ್ರಿ ಪ್ರೇಯಸಿಯ‌ ಮನೆಗೆ ಹೋಗಿ ಆಕೆಯ ಜೊತೆ ಏಕಾಂತದಲ್ಲಿ ಮಾತನಾಡುತ್ತಿದ್ದ. ಈ ವೇಳೆ ಆಕೆಯ ಮನೆಯವರಿಗೆ ಎಚ್ಚರವಾಗಿದೆ. ಗಾಬರಿಗೊಂಡು ತಪ್ಪಿಸಿಕೊಳ್ಳಲು ಓಡಿದ ಯುವಕ ತೆರೆದ ಬಾವಿಗೆ ಬಿದ್ದಿದ್ದಾನೆ. ಶಬ್ಧ ಕೇಳಿ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಸಹಿತ ಬಾವಿಯ ಸುತ್ತಲೂ ಸೇರಿದ ಹಲವರು ಕಷ್ಟಪಟ್ಟು ಆತನನ್ನು ಮೇಲಕ್ಕೆ ತ್ತಿದ್ದಾರೆ.


ಈ ಮಧ್ಯೆ ಯುವತಿಯ ಕುಟುಂಬಸ್ಥರು ಪಂಚಾಯಿತಿಯವರಿಗೆ ದೂರು ನೀಡಿದ್ದು, ಕೊನೆಗೆ ಈ ಪ್ರೇಮ ವಿಚಾರವನ್ನು ಅರಿತ ಹಿರಿಯರೆಲ್ಲರೂ ಸೇರಿ ದೇವಸ್ಥಾನದಲ್ಲಿ ವಿವಾಹ ನಡೆಸಿಕೊಟ್ಟಿದ್ದಾರೆ.



Join Whatsapp