ನಾನು ಮುಖ್ಯಮಂತ್ರಿ ಆಗಬಾರದು ಎಂಬ ಹೊಟ್ಟೆಕಿಚ್ಚು ನಮ್ಮ ಪಕ್ಷದ ಕೆಲವರಿಗಿತ್ತು: ಸಿದ್ದರಾಮಯ್ಯ

Prasthutha|

ಮೈಸೂರು: ನಾನು ಮುಖ್ಯಮಂತ್ರಿ ಆಗಬಾರದೆಂದು ನಮ್ಮ ಪಕ್ಷದ ಕೆಲವರಿಗೆ ಹೊಟ್ಟೆಕಿಚ್ಚು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಲು ಬಿಜೆಪಿ-ಜೆಡಿಎಸ್ ಒಳಒಪ್ಪಂದದ ಜೊತೆಗೆ ನಮ್ಮ ಪಕ್ಷದವರೂ ಕಾರಣಕರ್ತರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.    

- Advertisement -

“ಕಳೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಕೆಟ್ಟದಾಗಿ ಸೋಲುತ್ತೇನೆ ಎಂದು ಭಾವಿಸಿರಲಿಲ್ಲ. ಹಳ್ಳಿಯ ಜನರು ಪ್ರೀತಿಯಿಂದ ಕಂಡರೂ, ನನಗೆ ಮತ ಹಾಕಿಲ್ಲ. ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಎಂಬ ಹೊಟ್ಟೆಕಿಚ್ಚು ನಮ್ಮ ಪಕ್ಷದ ಕೆಲವರಿಗಿತ್ತು. ನಾನು ಸೋಲಲು ನಮ್ಮ ಪಕ್ಷದವರೂ ಕಾರಣಕರ್ತರಾಗಿದ್ದಾರೆ” ಎಂದು ಮೈಸೂರಿನಲ್ಲಿ ನಡೆದ ಗ್ರಾಮ್ ಜನಾಧಿಕಾರ ಸಮಾವೇಶದಲ್ಲಿ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರ ನನಗೆ ಹೆಚ್ಚು ವೇದನೆಯನ್ನು ಕೊಟ್ಟ ಕ್ಷೇತ್ರವಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ಚುನಾವಣೆಯಲ್ಲಿ ನನ್ನ ಮತ್ತು ಪಕ್ಷದ ವಿರೋಧವಾಗಿ ಕಾರ್ಯ ನಿರ್ವಹಿಸಿದವರು ತಾನಾಗಿಯೇ ಪಕ್ಷ ಬಿಟ್ಟು ಹೋಗಲಿ. ಪಕ್ಷದಲ್ಲಿದ್ದು ದ್ರೋಹಬಗೆಯುವಂತಹ ಖಳನಾಯಕರು ಯಾರೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp