►ಈ ಸರ್ಕಾರ ರೌಡಿಗಳ ಅಡ್ಡಾ ತೆರೆಯುತ್ತಿದೆಯೇ?
ಬೆಂಗಳೂರು: ರೌಡಿಶೀಟರ್ ಗಳು ರಾಜಕೀಯ ಪ್ರವೇಶ ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಾಗಲೇ ರಾಜ್ಯ ಸರಕಾರ, ಆನೇಕಲ್ ಪುರಸಭೆ ಸದಸ್ಯನಾಗಿ ರೌಡಿಶೀಟರ್ ಮಂಜುನಾಥ್ ರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆನೇಕಲ್ ಪುರಸಭೆಗೆ ರೌಡಿ ಶೀಟರ್ ಒಬ್ಬನನ್ನು ಸರ್ಕಾರ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಈ ಸರ್ಕಾರ ರೌಡಿಗಳ ಅಡ್ಡಾ ತೆರೆಯುತ್ತಿದೆಯೇ? ಮೋಸ್ಟ್ ವಾಂಟೆಡ್ ರೌಡಿಗಳು, ಪಾತಕಿಗಳು BJP ಪಾಳಯ ಸೇರಿಕೊಳ್ಳುತ್ತಿದ್ದಾರೆ. ಶಾಂತಿಯ ನಾಡಾದ ರಾಜ್ಯದಲ್ಲಿ ರೌಡಿಗಳ ಮೂಲಕ ರಕ್ತ ರಾಜಕಾರಣ ಮಾಡಲು ಮುಂದಾಗಿದೆಯೇ ಈ ಸರ್ಕಾರ ಎಂದು ಪ್ರಶ್ನೆ ಮಾಡಿದ್ದಾರೆ.
ವಾಂಟೆಡ್ ಲಿಸ್ಟ್ ನಲ್ಲಿರೋ ರೌಡಿಗಳು ಹಾಗೂ ಪಾತಕಿಗಳು BJP ಪಡಸಾಲೆಯಲ್ಲಿ ಅಡ್ಡಾಡುತ್ತಿದ್ದಾರೆ. ಕೆಲವು ರೌಡಿಶೀಟರ್ ಗಳನ್ನು ಸರ್ಕಾರವೇ ಆಯಕಟ್ಟಿನ ಹುದ್ದೆಗೆ ನೇಮಕ ಮಾಡುತ್ತಿದೆ. ಈ ಮೂಲಕ ಸರ್ಕಾರ ಏನು ಸಂದೇಶ ಕೊಡಲು ಹೊರಟಿದೆ? ಕರ್ನಾಟಕವನ್ನು ಗೂಂಡಾರಾಜ್ಯ ಮಾಡುವುದು BJP ನಾಯಕರ ಉದ್ದೇಶವೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾತಕಿಗಳ ಅಡ್ಡೆಯಾಗುತ್ತಿರುವ ಮಲ್ಲೇಶ್ವರದ BJP ಕಚೇರಿ ‘ಪಾಪಿಗಳ ಲೋಕ’ವಾಗಿದೆ. ಬಾಯಲ್ಲಿ ರಾಮ ಜಪ ಮಾಡುವ BJPಯವರು ರೌಡಿಗಳ ಸಂಗ ಮಾಡಿ ಹಾಳಾಗಿ ಹೋಗಿದ್ದಾರೆ. BJPಯವರಿಗೆ ಮರ್ಯಾದೆ ಇದ್ದರೆ ಇನ್ನಾದರೂ ಆದರ್ಶ ಪುರುಷ ರಾಮನ ಹೆಸರು ಹೇಳುವುದನ್ನು ನಿಲ್ಲಿಸಲಿ. ಕರ್ನಾಟಕವನ್ನು ರೌಡಿ ರಾಜ್ಯ ಮಾಡುವುದಾಗಿ ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ಹಾಕಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 3, 2022
ಆನೇಕಲ್ ಪುರಸಭೆಗೆ ರೌಡಿ ಶೀಟರ್ ಒಬ್ಬನನ್ನು ಸರ್ಕಾರ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ.
ಈ ಸರ್ಕಾರ ರೌಡಿಗಳ ಅಡ್ಡಾ ತೆರೆಯುತ್ತಿದೆಯೇ?
ಮೋಸ್ಟ್ ವಾಂಟೆಡ್ ರೌಡಿಗಳು, ಪಾತಕಿಗಳು BJP ಪಾಳಯ ಸೇರಿಕೊಳ್ಳುತ್ತಿದ್ದಾರೆ.
ಶಾಂತಿಯ ನಾಡಾದ ರಾಜ್ಯದಲ್ಲಿ ರೌಡಿಗಳ ಮೂಲಕ ರಕ್ತ ರಾಜಕಾರಣ ಮಾಡಲು ಮುಂದಾಗಿದೆಯೇ ಈ ಸರ್ಕಾರ? pic.twitter.com/gMk4HARC7E