ಮಂಗಳೂರು: ಕುವೈಟ್ ಹಾಗೂ ದುಬೈ ಅನಿವಾಸಿಗಳ ಪಾಲಿನ ಜನಪ್ರಿಯ ಸಮಾಜ ಸೇವಕ ಎಸ್. ಎಂ. ಬಶೀರ್ ಅವರು ಅನಾರೋಗ್ಯದಿಂದ ಇಂದು ಮಧ್ಯಾಹ್ನ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಬಿ.ಸಿ.ರೋಡ್ ಸಮೀಪದ ಶಾಂತಿ ಅಂಗಡಿಯ ಎಸ್.ಎಂ.ಬಶೀರ್ (50) ಕಳೆದೊಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕುವೈತ್ ನಲ್ಲಿ ಉದ್ಯೋಗಿಯಾಗಿದ್ದ ಎಸ್.ಎಂ.ಬಶೀರ್ ಬಳಿಕ ದುಬೈಯ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅವರು ಸಮಾಜಸೇವೆಯಲ್ಲಿ ಸದಾ ಸಕ್ರಿಯರಾಗಿದ್ದರು.