ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್: ಬೀಳದಂತೆ ತಡೆದ ಜೋಕೊ ವಿಡೋಡೊ

Prasthutha|

ಜಕಾರ್ತ: ಜಿ20 ಶೃಂಗಸಭೆಗಾಗಿ ಇಂಡೋನೆಷ್ಯಾದ ಬಾಲಿಯಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲುಗಳನ್ನು ಹತ್ತುವಾಗ ಎಡವಿದ್ದು, ಇಂಡೋನೇಷಿಯಾದ ಕೌಂಟರ್ಪಾರ್ಟ್ ಜೋಕೊ ವಿಡೋಡೊ ಅವರು ತಡೆದು ನಿಲ್ಲಿಸಿದ್ದಾರೆ.

- Advertisement -


ಮಂಗಳವಾರ ಇಬ್ಬರು ನಾಯಕರು ಬಾಲಿಯಲ್ಲಿನ ತಮನ್ ಹುತನ್ ರಾಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೋ ಬೈಡನ್ ಮೆಟ್ಟಿಲು ಹತ್ತುವಾಗ ಎಡವಿದ್ದಾರೆ. ಆದರೂ ಜೋ ಬೈಡನ್ ಅವರ ಕೈ ಹಿಡಿದು ಬೀಳದಂತೆ ವಿಡೋಡೋ ಅವರು ರಕ್ಷಿಸಿದ್ದಾರೆ. ವಿಡೋಡೊ ಅವರು ಸಮಯಕ್ಕೆ ಸರಿಯಾಗಿ ಜೋ ಬೈಡನ್ ರವರ ಕೈ ಹಿಡಿದುದರಿಂದ ಅನಾಹುತದಿಂದ ಪಾರಾಗಿದ್ದಾರೆ.



Join Whatsapp