ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ಹಾರಿಸಿದ ಕ್ಷಿಪಣಿಯೊಂದು ಪೋಲೆಂಡ್ ನಲ್ಲಿ ಪತನಗೊಂಡು ಇಬ್ಬರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಜೋ ಬೈಡನ್ ಸರ್ಕಾರ, ಇಂಡೋನೇಷ್ಯಾದಲ್ಲಿ ತುರ್ತು ಸಭೆ ನಡೆಸಿದೆ.
ಕ್ಷಿಪಣಿ ದಾಳಿಗೆ ಪೋಲೆಂಡ್ ನಾಗರಿಕರು ಬಲಿಯಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಉಂಟಾಗಿದೆ.
ಇಬ್ಬರು ನಾಗರಿಕರ ಸಾವಿಗೆ ಪೋಲೆಂಡ್ ತೀವ್ರ ಸಂತಾಪ ಸೂಚಿಸಿದೆ. ಅಮೆರಿಕದ ಪೂರ್ಣ ಬೆಂಬಲದೊಂದಿಗೆ, ಪೋಲೆಂಡ್ ಸಹಕಾರದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೋಲೆಂಡ್ ಅಧ್ಯಕ್ಷ ಅಂಡ್ರೇಜ್ ದುದಾ ಬುಧವಾರ ಸ್ಪಷ್ಟಪಡಿಸಿದ್ದಾರೆ.