ಕೇರಳ: 2013ರ ಕೊಲೆ ಪ್ರಕರಣದಲ್ಲಿ 11 ಆರೆಸ್ಸೆಸ್ ಕಾರ್ಯಕರ್ತರಿಗೆ ಶಿಕ್ಷೆ

Prasthutha|

ತಿರುವನಂತಪುರಂ: 2013ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತ ಅಣವೂರು ನಾರಾಯಣನ್ ನಾಯರ್ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶುಕ್ರವಾರ ದೋಷಿಗಳೆಂದು ತೀರ್ಪು ನೀಡಿದೆ.

- Advertisement -

ನೆಯ್ಯಾಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಕವಿತಾ ಗಂಗಾಧರನ್ ಅವರು ಪ್ರಕರಣದಲ್ಲಿ ಎಲ್ಲಾ 11 ಜನರನ್ನು ದೋಷಿಗಳೆಂದು ಘೋಷಿಸಿದ್ದು, ನವೆಂಬರ್ 14 ರಂದು ಶಿಕ್ಷೆ ಪ್ರಕಟವಾಗಲಿದೆ.

2013ರ ನವೆಂಬರ್ 5ರಂದು ಸಿಪಿಐ(ಎಂ) ನ ವಿದ್ಯಾರ್ಥಿ ಸಂಘಟನೆಯಾದ SFIನ ಆಗಿನ ವಲಯ ಕಾರ್ಯದರ್ಶಿಯಾಗಿದ್ದ ತನ್ನ ಮಗ ಶಿವಪ್ರಸಾದ್ ನ ಮೇಲೆ ಹಲ್ಲೆ ನಡೆಸಲು ಮನೆಯೊಳಗೆ ನುಗ್ಗಿದ ಆರೆಸ್ಸೆಸ್ ಕಾರ್ಯಕರ್ತರನ್ನು ತಡೆದ ನಾರಾಯಣನ್ ನಾಯರ್ ಅವರನ್ನು ಕೊಚ್ಚಿ ಬರ್ಬರವಾಗಿ ಕೊಲೆ ನಡೆಸಲಾಗಿತ್ತು.

- Advertisement -

ನಾಯರ್ ಅವರ ನಿವಾಸಕ್ಕೆ ರಾತ್ರೋ ರಾತ್ರಿ ನುಗ್ಗಿದ ಗುಂಪೊಂದು ಮೊದಲು ಅವರ ಮಗನ ಮೇಲೆ ಹಲ್ಲೆ ನಡೆಸಿತು. ನಂತರ ಮಗನ ರಕ್ಷಣೆಗೆ ಬಂದ ನಾಯರ್ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 


Join Whatsapp