ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿ ಹೆಬ್ಬಾವು; ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ

Prasthutha|

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ಭಾಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ಬದಿ ಆಗಾಗ ಕಂಡು ಬರುತ್ತಿದೆ.ಕಳೆದ ಒಂದು ವಾರದಿಂದ ಸುಮಾರು 3 ಬಾರಿ ಘಾಟಿಯಲ್ಲಿ ನಿತ್ಯ ಪ್ರಯಾಣಿಸುವ ಅನೇಕ ಪ್ರಯಾಣಿಕರು ಹಾವನ್ನು ಕಂಡಿದ್ದಾರೆ.

- Advertisement -

ಇದು ವಿಷಕಾರಿ ಅಲ್ಲದಿದ್ದರೂ ಅಪಾಯಕಾರಿಯಾಗಿರುವ ಕಾರಣ ಘಾಟಿ ಪ್ರದೇಶದಲ್ಲಿ ನಾನಾ ಕಾರಣಗಳಿಗೆ ವಾಹನದಿಂದ ಇಳಿಯುವ ಮಂದಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ವಾಹನ ಸವಾರರು ಕೂಡ ಹಾವಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪ್ರಯಾಣಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp