ಮಳಲಿ ಮಸೀದಿ: ನ್ಯಾಯಾಲಯ ಆದೇಶ| ಸಂಘಟನೆಗಳಿಂದ ವ್ಯತ್ಯಯ ಸಂದೇಶ ರವಾನೆ ಸರಿಯಲ್ಲ: ಕೆ.ಅಶ್ರಫ್

Prasthutha|

ಮಂಗಳೂರು: ಮಳಲಿ ಮಸೀದಿಗೆ ಸಂಬಂಧಿಸಿದ ತೀರ್ಪು ಪ್ರಕಟಗೊಂಡಿದೆ. ಆದರೆ ತೀರ್ಪನ್ನು ವೈಭವೀಕರಿಸಿ ಹಲವು ಸಂಘಟನೆಗಳಿಂದ ವ್ಯತ್ಯಯ ಸಂದೇಶ ರವಾನೆಯಾಗುತ್ತಿದ್ದು ಇದು ಸರಿಯಲ್ಲ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ. ಅಶ್ರಫ್ ಹೇಳಿದ್ದಾರೆ.

- Advertisement -

ಇಂದು ಮೂರನೇ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿ, ತನಿಖೆಯ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಮುಂದುವರಿಸಿಕೊಂಡು ಹೋಗುವಂತೆ ಆದೇಶಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅಶ್ರಫ್, ತೀರ್ಪಿನ ಬೆಳವಣಿಗೆಯನ್ನು ಕೆಲವು ಸಂಘಟನೆಗಳು ತಮ್ಮ ಹೇಳಿಕೆಯ ಮೂಲಕ ವೈಭವೀಕರಿಸಿ, ನ್ಯಾಯಾಲಯದ ವ್ಯಾಪ್ತಿಯ ವಿಷಯಗಳನ್ನು ಪ್ರಸ್ತಾಪಿಸಿ, ವ್ಯಾಜ್ಯದ ಬಗ್ಗೆಗಿನ ವಿಷಯವನ್ನು ನ್ಯಾಯಾಲಯದ ಇತಿಮಿತಿಯನ್ನು ಮೀರಿ ಸಾರ್ವಜನಿಕವಾಗಿ ಬಿಂಬಿಸುವುದು ಕಂಡು ಬರುತ್ತಿವೆ. ಇದು ಕಾನೂನಿನ ನಡೆಯ ವಿರುದ್ಧವಾಗಿದೆ ಎಂದು ಹೇಳಿದರು.

ಸಂಘಟನೆಗಳ ಇಂತಹ ಸಂದೇಶ, ಸಾರ್ವಜನಿಕ ಗೊಂದಲ ಸೃಷ್ಟಿಗೆ ಕಾರಣ ಆಗುತ್ತದೆ. ಆದುದರಿಂದ ಸಂಘಟನೆಗಳ ಅಥವಾ ವ್ಯಕ್ತಿಗಳ ವ್ಯತ್ಯಯ ಹೇಳಿಕೆಯನ್ನು ಪರಿಗಣಿಸದೆ ಇರುವಂತೆ ಜನರಲ್ಲಿ ವಿನಂತಿಸುತ್ತೇನೆ ಎಂದು ಅವರು ಹೇಳಿದರು



Join Whatsapp