ವಾಶಿಂಗ್ಟನ್: 12 ತಿಂಗಳ ಅವಧಿಯಲ್ಲಿ 96,917 ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಅಲ್ಲಿ ಸೆರೆಯಾಗಿದ್ದಾರೆ. 2022ರ ಆಕ್ಟೋಬರ್ ಮತ್ತು 2023ರ ಸೆಪ್ಟೆಂಬರ್ ನಡುವೆ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 96,917 ಭಾರತೀಯರನ್ನು ಸೆರೆ ಹಿಡಿಯಲಾಗಿದೆಯೆಂದು ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ಸಂರಕ್ಷಣಾ ಇಲಾಖೆಯ ಇತ್ತೀಚಿನ ವರದಿ ಹೇಳಿದೆ.
ಬಂಧಿತ 96,917 ಭಾರತೀಯರ ಪೈಕಿ 30,010 ಮಂದಿ ಕೆನಡದ ಗಡಿ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದರೆ, 41,770 ಮಂದಿ ಮೆಕ್ಸಿಕೊ ಗಡಿಯಿಂದ ಪ್ರವೇಶಿಸಿದ್ದರು. ಇದೇ ಅವಧಿಯಲ್ಲಿ ಅಮೆರಿಕಕ್ಕೆ ಕಾನೂನುಬದ್ಧವಾಗಿ ಅಮೆರಿಕಕ್ಕೆ ಬಂದ ಭಾರತೀಯರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ. ಅದರಲ್ಲಿ ಕೆಲವರು ತಾತ್ಕಾಲಿಕ ಪ್ರವೇಶಕ್ಕಾದರೆ, ಕೆಲವರು ಶಾಸ್ವತವಾಗಿ ಅಮೆರಿಕದಲ್ಲಿಯೇ ವಾಸಿಸಲು ಬಂದವರು.