Home ಟಾಪ್ ಸುದ್ದಿಗಳು ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ: 90 ಸಾವಿರ ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ: 90 ಸಾವಿರ ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಧಾರವಾಡ: ಇಲ್ಲಿನ ಕಾಮತ್ ಉಪಹಾರ ಹೋಟೆಲ್ ನಲ್ಲಿ ಪೂರೈಸಿದ್ದ ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಗೆ 90 ಸಾವಿರ ರೂ. ಪರಿಹಾರ ನೀಡಲು ಹೋಟೆಲ್ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಸೆಪ್ಟೆಂಬರ್ 2018 ರಂದು ಪೂರಿ ಬಾಜಿಯಲ್ಲಿ ಹಲ್ಲಿ ತಿಂದು ಆರೋಗ್ಯದಲ್ಲಿ ಏರು ಪೇರು ಕಂಡ ಕಂಡುಬಂದ ನಂತರ ವಿನಾಯಕ ಮತ್ತು ಸಹನಾ ಎನ್ನುವ ಇಬ್ಬರು ಗ್ರಾಹಕರು- ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದ್ದರು.ಇಬ್ಬರೂ ಗ್ರಾಹಕರಿಗೆ ಒಟ್ಟು 90 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ಅವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

Join Whatsapp
Exit mobile version