ನವದೆಹಲಿ: ಡಿಸೆಂಬರ್ 25ರಿಂದ ಭಾರತ್ ಜೋಡೋ ಯಾತ್ರೆಯು ದೆಹಲಿಯಲ್ಲಿ ಒಂಬತ್ತು ದಿನಗಳ ವಿರಾಮ ತೆಗೆದುಕೊಳ್ಳಲಿದ್ದು, ಜನವರಿ 3 ರಂದು ಪುನರಾರಂಭಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ವಿವಿರ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾವು ಬಳಸುತ್ತಿರುವ 60 ಕಂಟೇನರ್ ಗಳಿಗೆ ನಿರ್ವಹಣೆಯ ಅಗತ್ಯವಿದೆ. ಆದ್ದರಿಂದ ನಾವು ವಿರಾಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ 90 ದಿನಗಳಿಂದ ಕಂಟೇನರ್’ಗಳ ನಿರ್ವಹಣೆ ಮಾಡಿಲ್ಲ. ನಾವು ನಾಲ್ಕರಿಂದ ಐದು ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುವ ಪ್ರದೇಶಗಳನ್ನು ಹಾದುಹೋಗುವುದರಿಂದ ಚಳಿಗಾಲಕ್ಕಾಗಿ ನಾವು ಅದನ್ನು ಸಜ್ಜುಗೊಳಿಸಬೇಕು” ಎಂದು ಹೇಳಿದ್ದಾರೆ.