Home ರಾಷ್ಟ್ರೀಯ ಜೆಪಿ ನಡ್ಡಾರನ್ನು ಸ್ವಾಗತಿಸುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಭದ್ರತೆಯಲ್ಲಿ ಲೋಪ: ಎಂಟು ಪೊಲೀಸರ ಅಮಾನತು

ಜೆಪಿ ನಡ್ಡಾರನ್ನು ಸ್ವಾಗತಿಸುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಭದ್ರತೆಯಲ್ಲಿ ಲೋಪ: ಎಂಟು ಪೊಲೀಸರ ಅಮಾನತು

ಲಕ್ನೋ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಸ್ವಾಗತಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆರಳುವ ಸಂದರ್ಭದಲ್ಲಿ ಭದ್ರತಾ ಲೋಪ ಉಂಟಾಗಿದ್ದು, ಈ ನಿಟ್ಟಿನಲ್ಲಿ 8 ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 8 ಮಂದಿ ಪೊಲೀಸರನ್ನು ಗೋರಕ್ ಪುರ ಎಸ್ ಎಸ್ ಪಿ ವಿಪಿನ್ ತಾಡಾ ಅಮಾನತು ಮಾಡಿದ್ದಾರೆ. ನಡ್ಡಾರನ್ನು ಸ್ವಾಗತಿಸಲು ಗೋರಕ್ ಪುರ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆರಳುತ್ತಿರುವಾಗ ಅನೇಕ ವಾಹನಗಳು ಸಿಎಂ ಎದುರಿಗೆ ಬಂದಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡ ಎಸ್ ಎಸ್ ಪಿ ವಿಪಿನ್ ತಾಡಾ ಕುಲಂಕುಷ ತನಿಖೆಗೆ ಆದೇಶಿಸಿದ್ದರು.

Join Whatsapp
Exit mobile version