Home ಟಾಪ್ ಸುದ್ದಿಗಳು ಒಮಾನ್‌ನಲ್ಲಿ ಮಗುಚಿದ ತೈಲ ಸಾಗಣೆ ಹಡಗು: 8 ಮಂದಿ ಭಾರತೀಯರ ರಕ್ಷಣೆ

ಒಮಾನ್‌ನಲ್ಲಿ ಮಗುಚಿದ ತೈಲ ಸಾಗಣೆ ಹಡಗು: 8 ಮಂದಿ ಭಾರತೀಯರ ರಕ್ಷಣೆ

ಒಮಾನ್: ಇಲ್ಲಿನ ಕರಾವಳಿಯಲ್ಲಿ ಹಡಗು ಮುಳುಗಿ ನಾಪತ್ತೆಯಾಗಿದ್ದ 16 ಮಂದಿಯಲ್ಲಿ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಒಂಬತ್ತು ಸದಸ್ಯರಲ್ಲಿ ಎಂಟು ಮಂದಿ ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರು ಎಂದು ಮೂಲಗಳು ತಿಳಿಸಿವೆ. ಒಮಾನ್​​ನ ಪ್ರಮುಖ ಬಂದರು ಡುಗ್ಮ್ ನಿಂದ ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಈ ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ.

ಈ ಹಡಗು ಯೆಮನ್​​ ನ ಅದೆನ್​​ಗೆ ಹೊರಟಿತ್ತು ಎಂದು ಹೇಳಲಾಗಿದೆ.

ಡುಗ್ಮ್ ಬಂದರು ಒಮಾನ್‌ ನ ನೈಋತ್ಯ ಕರಾವಳಿಯಲ್ಲಿದೆ. ಇದು ಸುಲ್ತಾನೇಟ್‌ನ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳಿಗೆ ಸಮೀಪದಲ್ಲಿದೆ.

Join Whatsapp
Exit mobile version