Home ಟಾಪ್ ಸುದ್ದಿಗಳು ಕಾಂಗ್ರೆಸ್’ಗೆ ಎಂಟು ಕೋಟಿ ರೂ. ವಂಚನೆ ಆರೋಪ: ನಾನು ಓಡಿ ಹೋಗಿಲ್ಲ ಎಂದ ನಟಿ ರಮ್ಯಾ

ಕಾಂಗ್ರೆಸ್’ಗೆ ಎಂಟು ಕೋಟಿ ರೂ. ವಂಚನೆ ಆರೋಪ: ನಾನು ಓಡಿ ಹೋಗಿಲ್ಲ ಎಂದ ನಟಿ ರಮ್ಯಾ

ಬೆಂಗಳೂರು: ಕಾಂಗ್ರೆಸ್’ಗೆ ನಟಿ ರಮ್ಯಾ ಎಂಟು ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪದ ಕುರಿತು ರಮ್ಯಾ ಪ್ರತಿಕ್ರಿಯೆ ನೀಡಿದ್ದು, ” ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ರಮ್ಯಾ ಕಾಂಗ್ರೆಸ್ ಪಕ್ಷಕ್ಕೆ ಎಂಟು ಕೋಟಿ ರೂ. ವಂಚಿಸಿ ಓಡಿ ಹೋಗಿದ್ದಾಳೆ” ಎಂದು ಕನ್ನಡ ನ್ಯೂಸ್ ಗಳು ಪ್ರಕಟಿಸಿವೆ. ಇದು ನನ್ನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವಾಗಿದ್ದು, ನಾನು ಪಕ್ಷ ಬಿಟ್ಟು ಓಡಿ ಹೋಗಲಿಲ್ಲ. ನಾನು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದೆ. ನಾನು ಪಕ್ಷಕ್ಕೆ ಎಂಟು ಕೋಟಿ ರೂ. ವಂಚನೆ ಮಾಡಲಿಲ್ಲ. ನಾನು ಮೌನವಾಗಿದ್ದುದೇ ನನ್ನ ತಪ್ಪು ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.


ಮುಂದಿನ ಕರ್ನಾಟಕ ಭೇಟಿಯ ಸಂದರ್ಭದಲ್ಲಿ ಈ ವಿಚಾರದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕೆಂದು ನಾನು ಕೆ.ಸಿ ವೇಣುಗೋಪಾಲ್ ರಲ್ಲಿ ಮನವಿ ಮಾಡುತ್ತಿದ್ದೇನೆ. ಇಷ್ಟಾದರೂ ನನಗೆ ನೀವು ಸಹಾಯ ಮಾಡಿದರೆ ಮುಂದಿನ ನನ್ನ ಜೀವನದ ದಾರಿಯಲ್ಲಿ ಈ ಟ್ರೋಲ್ ಮತ್ತು ನಿಂದನೆಗಳೊಂದಿಗೆ ಜೀವಿಸುವ ಅವಶ್ಯಕತೆ ಇರುವುದಿಲ್ಲ ಎಂದು ರಮ್ಯಾ ಬರೆದುಕೊಂಡಿದ್ದಾರೆ.

Join Whatsapp
Exit mobile version