Home ಟಾಪ್ ಸುದ್ದಿಗಳು 74ನೇ ಗಣರಾಜ್ಯೋತ್ಸವ: ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

74ನೇ ಗಣರಾಜ್ಯೋತ್ಸವ: ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ದೇಶದ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ನೆರವೇರಿಸಿದರು.


ರಾಜಪಥ್ ಅನ್ನು ಕರ್ತವ್ಯಪಥ ಎಂದು ಮರುನಾಮಕರಣಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದ್ದು, ಧ್ವಜಾರೋಹಣದ ಬಳಿಕ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾಪಡೆಗಳು ಕೂಡ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿದ್ದು, ಈಜಿಪ್ಟ್ ಸೇನಾ ಪಡೆಗಳ 144 ಸೈನಿಕರು ಪ್ರಜಾರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.


ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸಿವೆ. ವಾಯುಪಡೆ ತಂಡದಿಂದ ಆಕಾಶ್ ಮಿಸೈಲ್, ಏರ್ ಡಿಫೆನ್ಸ್ ತಂಡ, ಬ್ರಿಡ್ಜ್ ಎಂಜಿನಿಯರಿಂಗ್ ತಂಡ, ಬ್ರಹ್ಮೋಸ್-861 ಮಿಸೈಲ್ ತಂಡ, ಕೆ9 ವಜ್ರಾ ಟ್ಯಾಂಕ್ ಗ್ರೂಪ್ ತಂಡ, ಕ್ವಿಕ್ ರೆಸ್ಪಾನ್ಸ್ ಲಡಾಖ್ ಸ್ಕೌಟ್ ತಂಡ, ಬಿಎಂಪಿ ಸಾರಥ್ ಇನ್ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ ತಂಡದಿಂದ ಪರೇಡ್ ನಡೆಯಿತು.


ಕರ್ತವ್ಯಪಥದಲ್ಲಿ ನಡೆದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಭಾರತೀಯ ಸೇನೆಯಿಂದ ಪ್ರದರ್ಶಿಸಲಾಯಿತು.


ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಉಪಸ್ಥಿತರಿದ್ದರು.

Join Whatsapp
Exit mobile version