ಹೊಸದಿಲ್ಲಿ: ಭಾರತದಲ್ಲಿ ಬಹುತೇಕ ಕೊಳಚೆ ಗುಂಡಿ ಸ್ವಚ್ಛತಾ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ದೇಶದಲ್ಲಿರುವ 58,098 ಕೊಳಚೆ ಗುಂಡಿ ಸ್ವಚ್ಛತಾ ಕಾರ್ಮಿಕರಲ್ಲಿ 42,594 ಮಂದಿ ಪರಿಶಿಷ್ಟ ಜಾತಿಯವರಾಗಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ, 42,594 ಮ್ಯಾನುಯಲ್ ಸ್ಕ್ಯಾವೆಂಜರ್ ಗಳು ಪರಿಶಿಷ್ಟ ಜಾತಿಗೆ, 421 ಮಂದಿ ಪರಿಶಿಷ್ಟ ಪಂಗಡಕ್ಕೆ ಮತ್ತು 431 ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಹೇಳಿದರು.
ದೇಶದಲ್ಲಿ ಸ್ಕಾವೆಂಜರ್ ಗಳನ್ನು ಗುರುತಿಸಲು 2013ರ ಕಾಯ್ದೆಯಡಿ ಸಮೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಬಹುತೇಕ ಕೊಳಚೆ ಗುಂಡಿ ಸ್ವಚ್ಛತಾ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಸಚಿವರು ಹೇಳಿದರು.