Home ಟಾಪ್ ಸುದ್ದಿಗಳು ಕಳ್ಳ ಭಟ್ಟಿ ಸೇವಿಸಿ 70 ಮಂದಿ ಸಾವು: ಮದ್ಯ ಕಳ್ಳಸಾಗಣೆದಾರನ ಬಂಧನ

ಕಳ್ಳ ಭಟ್ಟಿ ಸೇವಿಸಿ 70 ಮಂದಿ ಸಾವು: ಮದ್ಯ ಕಳ್ಳಸಾಗಣೆದಾರನ ಬಂಧನ

ಬಿಹಾರ: ಬಿಹಾರದಲ್ಲಿ ವಿಷ ಪೂರಿತ ಮದ್ಯ ಸೇವಿಸಿ ಇದುವರೆಗೆ 70 ಮಂದಿ ಸಾವನ್ನಪ್ಪಿದ್ದು,ಈ ಸಂಬಂಧ ಎಸ್’ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿ ಮದ್ಯ ಕಳ್ಳಸಾಗಣೆದಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರನ್ ಜಿಲ್ಲೆಯ ಅಕ್ರಮ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯ ಕಳ್ಳಸಾಗಣೆದಾರ ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈನನ್ನು ಬಂಧಿಸಿ, ಆರೋಪಿಯಿಂದ 2.17 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಸೇವನೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಶ್ರಖ್ ಮತ್ತು ಇಶುಪುರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎರಡು ಎಫ್’ಐಆರ್ ಗಳಲ್ಲಿ ಆರೋಪಿಯ ಹೆಸರಿಲ್ಲವಾದರೂ, ಎಸ್’ಐಟಿ ತನಿಖೆಯ ಸಂದರ್ಭದಲ್ಲಿ ಆರೋಪಿ ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಈ ಹಿಂದೆ ಮದ್ಯ ಸಾಗಾಣಿಕೆದಾರನ ಅಖಿಲೇಶ್ ಕುಮಾರ್ ಯಾದವ್ ವಿರುದ್ಧ ಅಬಕಾರಿ ಕಾಯ್ದೆಯಡಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

Join Whatsapp
Exit mobile version