ಬೆಂಗಳೂರು: ಇಂದಿನಿಂದ ರೈತರ ಪಂಪ್ ಸೆಟ್ ಗಳಿಗೆ 7 ತಾಸು ವಿದ್ಯುತ್ ಪೂರೈಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಯಚೂರು, ಬಳ್ಳಾರಿ ಥರ್ಮಲ್ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಅದು ಈಗ ಒಂದು ಸಾವಿರ ಮೆಗಾ ವ್ಯಾಟ್ ಉತ್ಪತ್ತಿ ಆಗುತ್ತಿದೆ. ಮೂರು ಸಾವಿರದ ಇನ್ನೂರು ಮೆಗಾ ವ್ಯಾಟ್ ಉತ್ಪಾದನೆ ಹೆಚ್ಚು ಮಾಡಿದ್ದೇವೆ. ರಾಜ್ಯದ ವಿದ್ಯುತ್ ಬೇರೆಯವರಿಗೆ ಕೊಡಬಾರದು ಅಂತ ತೀರ್ಮಾನಿಸಿದ್ದೇವೆ ಎಂದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಜೊತೆ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂಧನ ಇಲಾಖೆ ಜೊತೆ ಪರಿಶೀಲನಾ ಸಭೆ ನಡೆಸಿದ್ದೇವೆ. ಮೂರು ವಾರಗಳ ಹಿಂದೆ ಇದೇ ಇಲಾಖೆ ಜೊತೆ ಸಭೆ ಮಾಡಿ ಶಾರ್ಟೇಜ್ ಇದೆ ಅಂತೇಳಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದ್ದೆವು. ಕೆಲವು ಜನ ನಿರಂತರವಾಗಿ 5 ಗಂಟೆ ವಿದ್ಯುತ್ ಕೊಟ್ರೆ ಸಾಕು ಅಂದಿದ್ದರು. ಆಗ 3 ಪೇಸ್ 5 ಗಂಟೆ ವಿದ್ಯುತ್ ನೀಡುವಂತೆ ಸೂಚನೆ ಕೊಟ್ಟಿದ್ದೆ. ರಾಯಚೂರು, ಕೊಪ್ಪಳ, ಯಾದಗಿರಿ ಜನರು ಭೇಟಿ ಮಾಡಿ 7 ಗಂಟೆ ವಿದ್ಯುತ್ ಕೊಡ್ಬೇಕು ಅಂದ್ರು. ಈ ಭಾಗದಲ್ಲಿ 7 ಗಂಟೆ ಕೊಡ್ಬೇಕು ಅಂತ ಅಧಿಕಾರಿಗಳಿಗೆ ಹೇಳಿದ್ದೆ. ಭತ್ತ, ಕಬ್ಬು ಬೆಳೆಗಾರರಿಗೆ 7 ಗಂಟೆ ಕೊಡ್ಬೇಕು ಅಂತ ಹೇಳಿದ್ದೆ ಎಂದರು.