Home ಟಾಪ್ ಸುದ್ದಿಗಳು ಭೀಕರ ಅಪಘಾತ: ಒಂದೇ ಕಾಲೇಜಿನ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು

ಭೀಕರ ಅಪಘಾತ: ಒಂದೇ ಕಾಲೇಜಿನ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು

ಗುವಾಹಟಿ: ಕಾರು ಅಪಘಾತದಲ್ಲಿ ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ 7 ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.


ಗುವಾಹಟಿಯ ಜಾಲುಕ್ ಬಾರಿ ಪ್ರದೇಶದಲ್ಲಿರುವ ಎಇಸಿ ಕಾಲೇಜಿನ ಮೂರನೇ ವರ್ಷದ 10 ವಿದ್ಯಾರ್ಥಿಗಳು ಎಸ್ಯುವಿ ಕಾರಿನಲ್ಲಿ ಕಾಲೇಜು ಕ್ಯಾಂಪಸ್ ನಿಂದ ಹೊರಗೆ ಹೋಗುತ್ತಿದ್ದರು. ಈ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮತ್ತೊಂದು ಬದಿಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಬೊಲೆರೊ ಸರಕು ಸಾಗಣೆ ಕಾರಿಗೆ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ವಿರೂಪಗೊಂಡಿದ್ದು, ಸ್ಥಳದಲ್ಲೇ ಏಳು ವಿದ್ಯಾರ್ಥಿಗಳು ಮೃತರಾಗಿದ್ದಾರೆ.

Join Whatsapp
Exit mobile version