Home ಟಾಪ್ ಸುದ್ದಿಗಳು ಜೆಇಇ ಪರೀಕ್ಷಾ ಹಗರಣ : 7 ಆರೋಪಿಗಳನ್ನು ಬಂಧಿಸಿದ ಸಿಬಿಐ

ಜೆಇಇ ಪರೀಕ್ಷಾ ಹಗರಣ : 7 ಆರೋಪಿಗಳನ್ನು ಬಂಧಿಸಿದ ಸಿಬಿಐ

ನವದೆಹಲಿ: ಜೆಇಇ ಪರೀಕ್ಷಾ ಹಗರಣದಲ್ಲಿ 7 ಪ್ರಮುಖ ಆರೋಪಿಗಳನ್ನು ಕೇಂದ್ರ ತನಿಖಾ ತಂಡ (ಸಿಬಿಐ) ಬಂಧಿಸಿದೆ. ಬಂಧಿತರಲ್ಲಿ ಇಬ್ಬರು ನಿರ್ದೇಶಕರು, ಖಾಸಗಿ ಕಂಪೆನಿಯ ನಾಲ್ಕು ಉದ್ಯೋಗಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಒಳಗೊಂಡಿದ್ದಾನೆ ಸಿಬಿಐ ತಿಳಿಸಿದೆ.

2021 ರಲ್ಲಿ ಆಯೋಜಿಸಿದ ಜೆಇಇ ಪರೀಕ್ಷೆಯಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಸಿಬಿಐ ಖಾಸಗಿ ಸಂಸ್ಥೆ, ಆಡಳಿತ ನಿರ್ದೇಶಕರು ಮತ್ತು ಮೂವರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಬಂಧಿತ ಆರೋಪಿಗಳನ್ನು ದೆಹಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಬಂಧಿತರನ್ನು ಮುಂದಿನ ವಿಚಾರಣೆಯ ಸಲುವಾಗಿ ಸೆಪ್ಟೆಂಬರ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ

ಖಾಸಗಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಕಲಿಯಾಗಿ ಬರೆಯಲು ನೆರವಾಗಿತ್ತು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆಯಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

ಅಫಿನಿಟಿ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್, ನಿರ್ದೇಶಕರಾದ ಸಿದ್ದಾರ್ಥ್ಥ್ ಕೃಷ್ಣ, ವಿಶ್ವಂಭರ್ ಮಣಿ ತ್ರಿಪಾಠಿ ಮತ್ತು ಗೋವಿಂದ್ ವರ್ಷನಿ ಎಂಬವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

Join Whatsapp
Exit mobile version