Home ಟಾಪ್ ಸುದ್ದಿಗಳು ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ: 7 ಕಾರುಗಳು ಜಖಂ

ಯಲಹಂಕ ಮೇಲ್ಸೇತುವೆ ಮೇಲೆ ಸರಣಿ ಅಪಘಾತ: 7 ಕಾರುಗಳು ಜಖಂ

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಕುರಿತ ಅವಘಡಗಳ ನಡುವೆಯೇ ಇತ್ತ ಯಲಹಂಕದಲ್ಲಿ ಗುರುವಾರ ಮುಂಜಾನೆ ಸರಣಿ ಅಪಘಾತ ಸಂಭವಿಸಿದೆ.


ಯಲಹಂಕ ಮೇಲ್ಸೇತುವೆ ಮೇಲೆ ಇಂದು ಬೆಳಗ್ಗೆ 6 ರಿಂದ 6.30ರ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 7 ಕಾರುಗಳು ಅಪಘಾತಕ್ಕೀಡಾಗಿವೆ.


ಪರಿಣಾಮ 7 ಕಾರುಗಳೂ ಒಂದರ ಹಿಂದೆ ಒಂದು ಗುದ್ದುಕೊಂಡು ಜಖಂ ಆಗಿದ್ದು, ಈ ಪೈಕಿ ಒಂದು ಕಾರಿನಲ್ಲಿದ್ದ ಮಗುವಿನ ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ.


ಯಲಹಂಕಕ್ಕೆ ತೆರಳುವ ಮುಖ್ಯರಸ್ತೆಯಲ್ಲೇ ಈ ಅಪಘಾತ ಸಂಭವಿಸಿದ ಪರಿಣಾಮ, ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಫ್ಲೈ ಓವರ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ನಿಧಾನಗತಿಯಲ್ಲಿ ವಾಹನಗಳು ಸಂಚರಿಸುತ್ತಿವೆ.

Join Whatsapp
Exit mobile version